ಮೋದಿ ಪಾಕ್ ಭೇಟಿ, ಕರಣ್ ಜೋಹರ್ ಸಿನಿಮಾ ನಡುವಿನ ವ್ಯತ್ಯಾಸ ಅರ್ಥವಾಗುತ್ತಿಲ್ಲ: ಶತೃಘ್ನ ಸಿನ್ಹಾ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಾಕಿಸ್ತಾನ ಭೇಟಿಗೂ, ಕರಣ್ ಜೋಹರ್ ಸಿನಿಮಾಗೂ ಇರುವ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳುವುದರಲ್ಲಿ ನಾನು ವಿಫಲನಾಗಿದ್ದೇನೆಂದು ಬಿಜೆಪಿ ಹಿರಿಯ ನಾಯಕ ಶತೃಘ್ನ...

ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಾಕಿಸ್ತಾನ ಭೇಟಿಗೂ, ಕರಣ್ ಜೋಹರ್ ಸಿನಿಮಾಗೂ ಇರುವ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳುವುದರಲ್ಲಿ ನಾನು ವಿಫಲನಾಗಿದ್ದೇನೆಂದು ಬಿಜೆಪಿ ಹಿರಿಯ ನಾಯಕ ಶತೃಘ್ನ ಸಿನ್ಹಾ ಅವರು ಮಂಗಳವಾರ ಹೇಳಿದ್ದಾರೆ.
ಪಾಕಿಸ್ತಾನ ಕಲಾವಿದರ ನಿಷೇಧ ಕುರಿತಂತೆ ಕರಣ್ ಜೋಹರ್ ಬೆನ್ನಿಗೆ ನಿಂತು ಪ್ರಧಾನಿ ಮೋದಿಯವರ ವಿರುದ್ಧ ಹೇಳಿಕೆ ನೀಡಿದ್ದ ನಿರ್ದೇಶಕ ಕಶ್ಯಪ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೆಲ ಸಿನಿಮಾ ನಿರ್ಮಾಣಕಾರರು ಸುದ್ದಿಗೆ ಬರಲು ಹಾಗೂ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗುರಿ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಕರಣ್ ಸಿನಿಮಾಗೂ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಾಕಿಸ್ತಾನ ಭೇಟಿಗೂ ಇರುವ ಸಂಬಂಧವಾದರೂ ಏನು. ಪ್ರಸ್ತು ಇರುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಶ್ರಮವನ್ನು ಯಾರೂ ವ್ಯರ್ಥ ಮಾಡಬಾರದು. ಅನುರಾಗ್ ಸೇರಿದಂತೆ ಇನ್ನಿತರರು ಪ್ರಧಾನಿಯವರನ್ನು ಟೀಕೆ ಮಾಡುವುದು ಪಾಕಿಸ್ತಾನದ ಪರವಾಗಿ ಮೃದು ಧೋರಣೆಯನ್ನು ತೋರಿದಂತಾಗುತ್ತದೆ. ಅದನ್ನು ಎಲ್ಲರೂ ನೆನಪಿನಲ್ಲಿಡಬೇಕಾಗುತ್ತದೆ. ಇಂದು ಉತ್ತಮ ನೆರೆಯಾಗಿರುವವರೇ ನಾಳೆ ನಮಗೆ ಶತ್ರುಗಳಾಗಬಹುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


