ಬಿಗ್ ಬಾಸ್ ಕನ್ನಡ ಸೀಸನ್ 4: ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ವಾಣಿಶ್ರೀ
ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋನ ಮೊದಲ ವಾರದಲ್ಲೇ ಕಿರುತೆರೆ ನಟಿ ವಾಣಿಶ್ರೀ ಮನೆಯಿಂದ ಹೊರ ಬಿದ್ದಿದ್ದಾರೆ....

ಬೆಂಗಳೂರು: ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋನ ಮೊದಲ ವಾರದಲ್ಲೇ ಕಿರುತೆರೆ ನಟಿ ವಾಣಿಶ್ರೀ ಮನೆಯಿಂದ ಹೊರ ಬಿದ್ದಿದ್ದಾರೆ.
ಬಿಗ್‌ಬಾಸ್‌ನ ನಾಲ್ಕನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 15 ಸ್ಪರ್ಧಿಗಳು ಭಾಗವಹಿಸಿದ್ದು, ಈ ವಾರ ಭುವನ್, ಸಂಜನಾ, ಪ್ರಥಮ್ ಹಾಗೂ ವಾಣಿಶ್ರೀ ನಾಮ ನಿರ್ದೇಶನಗೊಂಡಿದ್ದರು.
ವೀಕ್ಷಕರು ಹಾಗೂ ಇತರ ಸ್ಪರ್ಧಿಗಳು ವಾಣಿಶ್ರೀಯವರನ್ನೇ ಹೊರಬರಲು ನಾಮನಿರ್ದೇಶನ ಮಾಡಿದ್ದರಿಂದ ವಾಣಿಶ್ರೀ ಹೊರಬರಬೇಕಾಯಿತು.
ಕಳೆದ ಎರಡು ದಶಕಗಳಿಂದ ವಾಣಿಶ್ರೀ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಮನೆಯೊಳಗೆ ಇತರ ಸ್ಪರ್ಥಿಗಳಿಗೆ ಇರಿಸು ಮುರಿಸು ತರಿಸುತ್ತಿದ್ದ ಹೇಳಿಕೆಗಳಿಂದ ಪ್ರಥಮ್ ಎಲಿಮಿನೇಟ್ ಆಗುತ್ತಾರೆಂದು ಊಹಿಸಲಾಗಿತ್ತು. ಆದರೆ ಅವರ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ವೋಟ್ ಮಾಜಿದ ಕಾರಣದಿಂದಾಗಿ ಪ್ರಥಮ್ ಸೇಫ್ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


