ಸಿನಿಮಾ ಸುದ್ದಿ

'ಮೊದಲಿಗೆ ಮಾಂಜಾ ಚಿತ್ರಕಥೆ ಬರೆದಿದ್ದು ಯಶ್ ಗಾಗಿ': ಡಾ. ಸೂರಿ

ಯಶ್ ಮತ್ತು ರಮ್ಯಾ ಒಟ್ಟಿಗೆ ನಟಿಸಿದ್ದ 'ಲಕ್ಕಿ' ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ನಿರ್ದೇಶಕ ಡಾ. ಸೂರಿ ತಮ್ಮ ಎರಡನೇ ಯೋಜನೆ 'ಮಾಂಜಾ'ಗೆ ಸಿದ್ಧರಾಗುತ್ತಿದ್ದಾತೆ.

'ಮೊದಲಿಗೆ ಮಾಂಜಾ ಚಿತ್ರಕಥೆ ಬರೆದಿದ್ದು ಯಶ್ ಗಾಗಿ': ಡಾ. ಸೂರಿ
ದೀಪಾ ಸನ್ನಿಧಿ
Published On :
ಬೆಂಗಳೂರು: ಯಶ್ ಮತ್ತು ರಮ್ಯಾ ಒಟ್ಟಿಗೆ ನಟಿಸಿದ್ದ 'ಲಕ್ಕಿ' ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ನಿರ್ದೇಶಕ ಡಾ. ಸೂರಿ ತಮ್ಮ ಎರಡನೇ ಯೋಜನೆ 'ಮಾಂಜಾ'ಗೆ ಸಿದ್ಧರಾಗುತ್ತಿದ್ದಾತೆ. ವಿಜಯದಶಮಿ ದಿನ ಯಶ್ ಕ್ಲಾಪ್ ಮಾಡುವ ಮೂಲಕ ಸಿನೆಮಾದ ಮುಹೂರ್ತ ನೆರವೇರಿದೆ. 
ದಂತ ವೈದ್ಯ ವೃತ್ತಿಯಿಂದ ನಿರ್ದೇಶನದತ್ತ ಜಿಗಿದ ಸೂರಿ, 'ಮಾಂಜಾ' ಸಿನಿಮಾಗಾಗಿ ಅನೀಶ್ ತೇಜೇಶ್ವರ್ ಮತ್ತು ದೀಪಾ ಸನ್ನಿಧಿ ಅವರನ್ನು ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಟೀಸರ್ ಹೊರತರಲು ನಿರತರಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. 
ಡಾ. ಸೂರಿ ಹೇಳುವಂತೆ 'ಮಾಂಜಾ' ಕನ್ನಡದ ಆಡುಭಾಷೆಯಲ್ಲಿ ಸಿಹಿ ಸೇಡು ಎಂಬ ಅರ್ಥದಲ್ಲಿ ಬಳುಸತ್ತಾರೆ ಮತ್ತು ಅನಿಶ್ ಅವರನ್ನು ಈ ಸಿನೆಮಾಗೆ ಶಿಪಾರಸ್ಸು ಮಾಡಿದ್ದು ಯಶ್ ಅವರೇ ಅಂತೆ. "ಅನೀಶ್ ಅವರಿಗೆ ಒಳ್ಳೆಯ ಸಾಮರ್ಥ್ಯ ಇದೆ ಮತ್ತು ನಾನು ಅವರಿಗಾಗಿಯೇ ಸಿನೆಮಾ ಮಾಡಬೇಕು ಎಂದು ಹೇಳಿದ್ದು ಯಶ್" ಎನ್ನುತ್ತಾರೆ. 
ಇದು ಕಮರ್ಷಿಯಲ್ ಮನರಂಜನಾ ಚಿತ್ರ ಎಂದು ಬಣ್ಣಿಸುವ ನಿರ್ದೇಶಕ ಚಿಕ್ಕಣ್ಣ, ಸಾಧುಕೋಕಿಲಾ, ರವಿಶಂಕರ್, ರಂಗಾಯಣ ರಘು ಮತ್ತು ಕಡ್ಡಿಪುಡಿ ಚಂದ್ರು ಸಿನೆಮಾದ ತಾರಾಗಣದಲ್ಲಿದ್ದಾರಂತೆ. "ಅರುಣ್ ಸಾಗರ್ ಕೂಡ ನಮ್ಮನ್ನು ಸೇರುವ ಸಾಧ್ಯತೆಯಿದೆ ಮತ್ತು ಬಹುದೊಡ್ಡ ಮನರಂಜನಾ ತಾರಾಗಣ ಇದಾಗಲಿದೆ" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.