ಸಿನಿಮಾ ಸುದ್ದಿ

'ಚಕ್ರವರ್ತಿ'ಯ ಕ್ರ್ಯೂಸ್ ಕಥೆಗಳು!

ಚಿಂತನ್ ಚೊಚ್ಚಲ ನಿರ್ದೇಶನದ 'ಚಕ್ರವರ್ತಿ' ದಿನದಿಂದ ದಿನಕ್ಕೆ ನಟ ದರ್ಶನ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸುತ್ತಿದೆ. ಸಮುದ್ರದಲ್ಲಿ ಚಲಿಸುತ್ತಿದ್ದ 12 ಅಂತಸ್ತಿನ ಹಡಗಿನಲ್ಲಿ ಸಿನೆಮಾದ ಪ್ರಮುಖ ಭಾಗದ

'ಚಕ್ರವರ್ತಿ'ಯ ಕ್ರ್ಯೂಸ್ ಕಥೆಗಳು!
ನಟ ದರ್ಶನ್
Published On :
ಬೆಂಗಳೂರು: ಚಿಂತನ್ ಚೊಚ್ಚಲ ನಿರ್ದೇಶನದ 'ಚಕ್ರವರ್ತಿ' ದಿನದಿಂದ ದಿನಕ್ಕೆ ನಟ ದರ್ಶನ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸುತ್ತಿದೆ. ಸಮುದ್ರದಲ್ಲಿ ಚಲಿಸುತ್ತಿದ್ದ 12 ಅಂತಸ್ತಿನ ಹಡಗಿನಲ್ಲಿ ಸಿನೆಮಾದ ಪ್ರಮುಖ ಭಾಗದ ಚಿತ್ರೀಕರಣಗೊಂಡಿರುವುದು ಇದಕ್ಕೆ ಕಾರಣ. 
20 ದಿನಗಳ ಚಿತ್ರೀಕರಣದ ನಂತರ ಚಿತ್ರತಂಡ ನಗರಕ್ಕೆ ಹಿಂದಿರುಗಿದೆ. ಹಡಗು ಸಿಂಗಾಪುರಿನಿಂದ ಮಲೇಷಿಯಾ ಮತ್ತು ಹಿಂದಕ್ಕೆ ಪ್ರಯಾಣ ಮಾಡುವಾಗ ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಿರುವುದಾಗಿ ಚಿಂತನ್ ತಿಳಿಸುತ್ತಾರೆ. "ಹಡಗಿನಲ್ಲಿ ಚಿತ್ರೀಕರಣ ವಿಭಿನ್ನವಾಗಿತ್ತು. ಹಡಗು ಸಮುದ್ರ ಮಧ್ಯೆ ಚಲಿಸುತ್ತಿರುವಾಗ ನಾವು ಚಿತ್ರೀಕರಣ ಮಾಡಿದೆವು" ಎಂದು ಅವರು ತಿಳಿಸುತ್ತಾರೆ. 
ನಾವು ಯಾವುದೋ ಪುಟ್ಟ ನಗರದಲ್ಲಿ ಇದ್ದಂತೆ ಭಾಸವಾಯಿತು. ಕೆಸಿನೋ ಒಂದನ್ನು ಹೊರತುಪಡಿಸಿ ಹಡಗಿನ ಎಲ್ಲ ಭಾಗದಲ್ಲೂ ಚಿತ್ರೀಕರಣ ನಡೆಸಿದೆವು. ಕೆಸಿನೋ ಒಳಗೆ ಕ್ಯಾಮರಾ ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ ಎನ್ನುತ್ತಾರೆ ಚಿಂತನ್. 
ಈಗಾಗಲೇ ಶೇಕಡಾ 75 ರಷ್ಟು ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲಿ ಉಳಿದ ಚಿತ್ರೀಕರಣ ಮುಗಿಸಿ, ಪರಿಚಯಾತ್ಮಕ ಹಾಡಿಗಾಗಿ ಅಕ್ಟೋಬರ್ 25 ರಂದು ಬ್ಯಾಂಕಾಕ್ ಗೆ ತೆರಳುತ್ತಿರುವುದಾಗಿ ತಿಳಿಸುತ್ತಾರೆ ಚಿಂತನ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.