ಸಪ್ತಪದಿ ತುಳಿಯಲು ಸಿದ್ಧರಾದ ನಿರ್ದೇಶಕ ರಿಷಬ್ ಶೆಟ್ಟಿ
ಈಗ ತಾರೆಯರ ಮದುವೆಯ ಸೀಸನ್. ಯಶ್ ಮತ್ತು ರಾಧಿಕಾ ಪಂಡಿತ್ ಡಿಸೆಂಬರ್ ನಲ್ಲಿ ಮದುವೆಯಾಗುತ್ತಿರುವ ಬೆನ್ನಲ್ಲೇ, ನಿರ್ದೇಶಕ ರಿಷಬ್ ಶೆಟ್ಟಿ ಫೆಬ್ರವರಿ ೯ ಕ್ಕೆ ಸಪ್ತಪದಿ ತುಳಿಯಲಿದ್ದಾರೆ ಎಂದು

Published On :
ಬೆಂಗಳೂರು: ಈಗ ತಾರೆಯರ ಮದುವೆಯ ಸೀಸನ್. ಯಶ್ ಮತ್ತು ರಾಧಿಕಾ ಪಂಡಿತ್ ಡಿಸೆಂಬರ್ ನಲ್ಲಿ ಮದುವೆಯಾಗುತ್ತಿರುವ ಬೆನ್ನಲ್ಲೇ, ನಿರ್ದೇಶಕ ರಿಷಬ್ ಶೆಟ್ಟಿ ಫೆಬ್ರವರಿ ೯ ಕ್ಕೆ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಿದ್ದೂ, ಅವರ ವೃತ್ತಿ ಜೀವನದ ಆದ್ಯತೆಗಳನ್ನು ಪೂರೈಸುತ್ತಿದ್ದಾರಂತೆ.
ರಿಷಬ್ ಶೆಟ್ಟಿ ಸದ್ಯಕ್ಕೆ 'ಕಿರಿಕ್ ಪಾರ್ಟಿ' ಬಿಡುಗಡೆಗಾಗಿ ಕೆಲಸ ಮಾಡುತ್ತಿದ್ದಾರೆ. ಗೆಳೆಯ ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸುತ್ತಿರುವ ಈ ಸಿನೆಮಾದ ನಿರ್ದೇಶಕ ರಿಷಬ್. ಇದರ ನಂತರ ಮಕ್ಕಳ ಸಿನೆಮಾವೊಂದನ್ನು ರಿಷಬ್ ಕೈಗೆತ್ತಿಕೊಳ್ಳಲಿದ್ದು ನಂತರ ನಿರುಪ್ ಭಂಢಾರಿ ಅವರ ಭೂಗತ ಲೋಕದ ಸಿನೆಮಾವೊಂದನ್ನು ನಿರ್ದೇಶಿಸಲಿದ್ದಾರೆ.
ತಮ್ಮ ಮದುವೆ ಬಗ್ಗೆ ಮಾತಿಗಿಳಿದ ರಿಷಬ್ "ಇದು ನಿಶ್ಚಯ ಮಾಡಿದ ಮದುವೆ. ನನ್ನ ಪೋಷಕರೇ ವಧುವನ್ನು ಹುಡುಕಿದ್ದು, ಅವರ ಹೆಸರು ಪ್ರಗತಿ ಶೆಟ್ಟಿ ಮತ್ತು ಬೆಂಗಳೂರಿನ ಸಾಫ್ಟ್ವೇರ್ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಾರೆ" ಎಂದು ತಿಳಿಸುತ್ತಾರೆ.
ಕಿರಿಕ್ ಪಾರ್ಟಿ ಬಿಡುಗಡೆ ಮತ್ತು ಪ್ರಚಾರದ ನಂತರ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುವುದಾಗಿ ತಿಳಿಸುವ ರಿಷಬ್ "ಮಾರ್ಚ್ ನಲ್ಲಿ ನಿರುಪ್ ಅವರ ಸಿನೆಮಾ ಪ್ರಾರಂಭಿಸಲಿದ್ದೇನೆ ಮತ್ತು ಇದು ನಾನು ಯೋಜಿಸಿರುವ ಮಕ್ಕಳ ಸಿನೆಮಾ ಮುಗಿಸಿದ ಮೇಲಷ್ಟೇ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


