ವರ್ಷಕ್ಕೆ ಎರಡು ಸಿನೆಮಾ ನಿಯಮ ಮುರಿದ ಪುನೀತ್ ರಾಜಕುಮಾರ್
೨೦೦೮ ರಿಂದಲೂ ಕನ್ನಡ ನಟ ಪುನೀತ್ ರಾಜಕುಮಾರ್ ವರ್ಷಕ್ಕೆ ಎರಡು ಸಿನೆಮಾಗಳಂತೆ ನಟಿಸುತ್ತಾ ಬಂದಿದ್ದಾರೆ. ೨೦೧೭ ರಲ್ಲಿ ಅವರ ಮಹತ್ವಾಕಾಂಕ್ಷೆ ಹಿರಿದಾಗಿದೆ. ೨೦೧೬ ರಲ್ಲಿ 'ಚಕ್ರವ್ಯೂಹ'

Published On :
ಬೆಂಗಳೂರು: ೨೦೦೮ ರಿಂದಲೂ ಕನ್ನಡ ನಟ ಪುನೀತ್ ರಾಜಕುಮಾರ್ ವರ್ಷಕ್ಕೆ ಎರಡು ಸಿನೆಮಾಗಳಂತೆ ನಟಿಸುತ್ತಾ ಬಂದಿದ್ದಾರೆ. ೨೦೧೭ ರಲ್ಲಿ ಅವರ ಮಹತ್ವಾಕಾಂಕ್ಷೆ ಹಿರಿದಾಗಿದೆ. ೨೦೧೬ ರಲ್ಲಿ 'ಚಕ್ರವ್ಯೂಹ' ಮತ್ತು 'ದೊಡ್ಮನೆ ಹುಡುಗ' ತೆರೆ ಕಂಡು ಯಶಸ್ಸು ಗಳಿಸಿದ ಮೇಲೆ ಈಗ ೨೦೧೭ ಕ್ಕೆ 'ರಾಜಕುಮಾರ'ನಿಂದ ಪ್ರಾರಂಭವಾಗಿ ನಾಲ್ಕು ದೊಡ್ಡ ಬ್ಯಾನರ್ ಸಿನೆಯಾಗಳಲ್ಲಿ ನಟಿಸಲು ಮುಂದಾಗಿದ್ದಾರೆ.
ಹೊಂಬಾಳೆ ಫಿಲಂಸ್ ನಿರ್ಮಿಸಿರುವ 'ರಾಜಕುಮಾರ' ಈಗ ಜನವರಿ ೩ ನೇ ವಾರದಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸಂತೋಷ್ ಆನಂದರಾಮ್ ನಿರ್ದೇಶನದ ಈ ಚಿತ್ರ ಈಗ ಡಬ್ಬಿಂಗ್ ಕಾರ್ಯದಲ್ಲಿ ನಿರತವಾಗಿದ್ದು, ಸಾಧು ಕೋಕಿಲಾ ಜೊತೆಗಿನ ಕೆಲವು ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿಯಿದೆ.
ಅಧಿಕೃತವಾಗಿ ಘೋಷಣೆಯಾಗಿರುವಂತೆ ಅವರ ಮುಂದಿನ ಸಿನೆಮಾ ತಮಿಳಿನ 'ಪೂಜೈ' ರಿಮೇಕ್. 'ಭಜರಂಗಿ' ಮತ್ತು 'ವಜ್ರಕಾಯ' ಖ್ಯಾತಿಯ ಎ ಹರ್ಷ ಇದನ್ನು ನಿರ್ದೇಶಿಸುತ್ತಿದ್ದು, ಜನವರಿ ಮಧ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂಲಗಳ ಪ್ರಕಾರ ಪವರ್ ಸ್ಟಾರ್ ನಂತರ ನಿರ್ಮಾಪಕ ಲಗದಾಪತಿ ಶ್ರೀಧರ್ ಅವರ ಯೋಜನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.
"ಈ ಸಿನೆಮಾಗೆ ಪುನೀತ್ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಶೀಘ್ರದಲ್ಲೇ ವಿವರಗಳನ್ನು ಘೋಷಿಸಲಾಗುತ್ತದೆ" ಎನ್ನುತ್ತವೆ ಮೂಲಗಳು.
ಹಾಗೆಯೇ ೨೦೧೭ ರಲ್ಲಿ ಮತ್ತೊಂದು ದೊಡ್ಡ ಬ್ಯಾನರ್ ಚಿತ್ರ 'ಜೇಮ್ಸ್' ಅನ್ನು ಪುನೀತ್ ಘೋಷಿಸಿಕೊಂಡಿದ್ದಾರೆ. "ಚೇತನ್ ಕುಮಾರ್ ಅವರ ಈ ಸ್ಕ್ರಿಪ್ಟ್ ಅನ್ನು ಪುನೀತ್ ಬಹಳ ಇಷ್ಟ ಪಟ್ಟಿದ್ದು, ಇದು ಮುಂದಿನ ವರ್ಷ ಅವರು ತೊಡಗಿಸಿಕೊಳ್ಳಲಿರುವ ಮತ್ತೊಂದು ಚಿತ್ರ" ಎನ್ನುತ್ತವೆ ಮೂಲಗಳು.
ಈಮಧ್ಯೆ ಗೌತಮ್ ಮೆನನ್ ಕೂಡ ಪುನೀತ್ ಜೊತೆಗೆ ಸಿನೆಮಾವೊಂದನ್ನು ಮಾಡಲಿದ್ದಾರೆ ಮತ್ತು ಸೂರಿ-ಪುನೀತ್ ಜೋಡಿ ಮತ್ತೆ ಒಂದಾಗಲಿದೆ ಎಂಬ ವದಂತಿಗಳು ಕೂಡ ಇವೆ. ಇದು ಸಾಧ್ಯವಾದರೆ 'ಜಾಕಿ', 'ಅಣ್ಣಾ ಬಾಂಡ್' ಮತ್ತು 'ದೊಡ್ಮನೆ ಹುಡುಗ' ನಂತರ ಈ ಜೋಡಿಯ ನಾಲ್ಕನೇ ಸಿನೆಮಾ ಇದಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth Rajkumarಪುನೀತ್ ರಾಜಕುಮಾರ್Dodmane Hudugaದೊಡ್ಮನೆ ಹುಡುಗRajakumaraರಾಜಕುಮಾರಸಂತೋಷ್ ಆನಂದರಾಮ್Santosh Anadaram
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


