ಸಿನಿಮಾ ಸುದ್ದಿ

ಯಾವುದೇ ಕಟ್ ಇಲ್ಲದೆ ಒಂದೇ ಟೇಕ್ ನಲ್ಲಿ 'ಕಂದಾ' ಚಿತ್ರೀಕರಣ

ಸಂಕಲನಕಾರರಾಗಿ ೧೫ ವರ್ಷದ ಅನುಭವವನ್ನು ಸೋಲೋಮಾನ್ ಕೆ ಜಾರ್ಜ್ ಈಗ ತಮ್ಮ ನಿರ್ದೇಶನದ ಚೊಚ್ಚಲ ಕನ್ನಡ ಚಲನಚಿತ್ರ 'ಕಂದಾ'ದಲ್ಲಿ ತೊಡಗಿಸಿಕೊಂಡಿದ್ದಾರೆ.

ಯಾವುದೇ ಕಟ್ ಇಲ್ಲದೆ ಒಂದೇ ಟೇಕ್ ನಲ್ಲಿ 'ಕಂದಾ' ಚಿತ್ರೀಕರಣ
'ಕಂದಾ' ಸಿನೆಮಾದ ಸ್ಟಿಲ್
Published On :
ಬೆಂಗಳೂರು: ಸಂಕಲನಕಾರರಾಗಿ ೧೫ ವರ್ಷದ ಅನುಭವವನ್ನು ಸೋಲೋಮಾನ್ ಕೆ ಜಾರ್ಜ್ ಈಗ ತಮ್ಮ ನಿರ್ದೇಶನದ ಚೊಚ್ಚಲ ಕನ್ನಡ ಚಲನಚಿತ್ರ 'ಕಂದಾ'ದಲ್ಲಿ ತೊಡಗಿಸಿಕೊಂಡಿದ್ದಾರೆ.
೯೨ ನಿಮಿಷದ ಈ ಚಿತ್ರವನ್ನು ಒಂದೇ ಟೇಕ್ ನಲ್ಲಿ ಸೋನಿ ಎಫ್ ಎಸ್ ೭ ಕ್ಯಾಮರಾ ಬಳಸಿ ಚಿತ್ರಿಸಲಾಗಿದೆ. "ಶೀರ್ಷಿಕೆ ಮತ್ತು ಚಿತ್ರತಂಡದ ಹೆಸರುಗಳನ್ನು ತೋರಿಸಲು ಐದು ನಿಮಿಷ ಸೇರಿ ಸಿನೆಮಾ ೯೭ ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ" ಎಂದು ಸೋಲೋಮಾನ್ ಹೇಳಿದ್ದಾರೆ. 
ಈ ಸಿನೆಮಾ ಸಂಪೂರ್ಣವಾಗಿ ಕೆ ಆರ್ ಪುರಂನ ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿದೆ. "ಈ ಸ್ಟುಡಿಯೋದಲ್ಲಿಯೇ ಸಿನೆಮಾದ ಸ್ಕ್ರಿಪ್ಟ್ ಬರೆದದ್ದು. ಅಂತಿಮ ಚಿತ್ರೀಕರಣ ನಡೆಸುವುದಕ್ಕೂ ಮುಂಚಿತವಾಗಿ ತಾರಾಗಣ ಮತ್ತು ತಂತ್ರಜ್ಞರು  ೨೫ ದಿನಗಳವರೆಗೆ ತಾಲೀಮು ನಡೆಸಿದೆವು" ಎಂದು ಅವರು ವಿವರಿಸುತ್ತಾರೆ. 
ಇದು ಮಹಿಳಾ ಕೇಂದ್ರಿತ ಸಿನೆಮಾ ಎಂದು ತಿಳಿಸುವ ನಿರ್ದೇಶಕ ರಿಯಾ ದೇವಾಡಿಗ, ದಿವ್ಯ ಚವಾಣ್, ನೀನಾಸಂ ಪ್ರದೀಪ್ ಮತ್ತು ಗಿರೀಶ್ ಶ್ರೀವಾಸ್ತವ್ ನಟಿಸುತ್ತಿರುವುದಾಗಿ ಹೇಳಿದ್ದಾರೆ. "ಸಿನೆಮಾ ಐದು ಪಾತ್ರಗಳ ಮೇಲೆ ನಡೆದರೆ, ಸ್ಕ್ರೀನ್ ಪ್ಲೆ ನಲ್ಲಿ ೭ ಪಾತ್ರಗಳಿವೆ, ಇದು ಗೊಂದಲ ಮತ್ತು ಕುತೂಹಲವನ್ನು ಮೂಡಿಸುತ್ತದೆ" ಎಂದು ಸೋಲೋಮಾನ್ ಹೇಳುತ್ತಾರೆ. 
ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನೆಮಾಗೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ. ಸದ್ಯಕ್ಕೆ ಈ  ಸಿನೆಮಾ ಸಿನೆಮೋತ್ಸವಗಳಲ್ಲಿ ಭಾಗವಹಿಸಿದೆ. 
ದಿವಂಗತ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ತಮ್ಮ ಗುರುಗಳು ಎಂದು ಹೇಳಿಕೊಳ್ಳುವ ಸೋಲೋಮಾನ್ "ಅವರು ಬಹಳ ವರ್ಷಗಳಿಂದ ನನ್ನ ಸ್ಫುರ್ತಿ" ಎನ್ನುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.