ಸಿನಿಮಾ ಸುದ್ದಿ

'ವಿಐಪಿ ರಿಮೇಕ್ ನಲ್ಲಿ ಧನುಷ್ ಅವರನ್ನು ನಕಲು ಮಾಡುವುದಿಲ್ಲ': ಮನೋರಂಜನ್

ಹಿರಿಯ ನಟ ರವಿಂಚಂದ್ರನ್ ಪುತ್ರ ನಟ ಮನೋರಂಜನ್ ಇತ್ತೀಚೆಗಷ್ಟೇ ತಮ್ಮ ಮೊದಲ ಸಿನೆಮಾ 'ಸಾಹೇಬ' ಚಿತ್ರೀಕರಣ ಮುಗಿಸಿದ್ದು, ಅಲ್ಪ ವಿರಾಮ ತೆಗೆದುಕೊಂಡಿದ್ದಾರೆ.

'ವಿಐಪಿ ರಿಮೇಕ್ ನಲ್ಲಿ ಧನುಷ್ ಅವರನ್ನು ನಕಲು ಮಾಡುವುದಿಲ್ಲ': ಮನೋರಂಜನ್
ನಟ ಮನೋರಂಜನ್
Published On :
ಬೆಂಗಳೂರು: ಹಿರಿಯ ನಟ ರವಿಂಚಂದ್ರನ್ ಪುತ್ರ ನಟ ಮನೋರಂಜನ್ ಇತ್ತೀಚೆಗಷ್ಟೇ ತಮ್ಮ ಮೊದಲ ಸಿನೆಮಾ 'ಸಾಹೇಬ' ಚಿತ್ರೀಕರಣ ಮುಗಿಸಿದ್ದು, ಅಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲೇ ಅವರು ಧನುಷ್ ಅವರ ತಮಿಳು ಸಿನೆಮಾ ವಿಐಪಿ ಸಿನೆಮಾದ ರಿಮೇಕ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ, ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಇನ್ನು ಹೆಸರಿಡಬೇಕಾಗಿದೆ. 
ತಮ್ಮ ಸಿದ್ಧತೆ ಬಗ್ಗೆ ಮಾತನಾಡುವ ಮನೋರಂಜನ್ "ವಿಐಪಿ ಧನುಷ್ ಅವರ ೨೫ ನೆಯ ಸಿನೆಮಾ ಮತ್ತು ನಾನು ಹೊಸಬ ಎಂದು ನಿರ್ದೇಶಕರಿಗೆ ತಿಳಿದಿದೆ. ಅವರು ಈಗಾಗಲೇ ಇಮೇಜ್ ಸೃಷ್ಟಿಸಿಕೊಂಡಿರುವ ನಟ, ನಾನಿನ್ನು ಪ್ರೇಕ್ಷಕರ ಮುಂದೆ ಸಾಬೀತುಪಡಿಸುವುದು ಸಾಕಷ್ಟಿದೆ. ಧನುಷ್ ನಿರ್ವಹಿಸಿದ್ದ ಪಾತ್ರದಲ್ಲಿ ನಟಿಸುವುದು ಸವಾಲು, ಹೀಗಿದ್ದೂ ನಾನು ಅವರ ನಟನೆಯನ್ನು ನಕಲು ಮಾಡುವುದಿಲ್ಲ, ಬದಲಿಗೆ ನನ್ನದೇ ಶೈಲಿಯಲ್ಲಿ ಅದನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತೇನೆ" ಎನ್ನುತ್ತಾರೆ. 
ತಮ್ಮ ತಂದೆಯ ಒಪ್ಪಿಗೆ ಪಡೆದ ಮೇಲಷ್ಟೇ ತಾವು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸುವ ನಟ "ವಿಐಪಿ ಸಿನೆಮಾ ನೋಡಿದ್ದ ನಮ್ಮ ತಂದೆ, ಆ ಪಾತ್ರ ನನಗೆ ಒಪ್ಪಿಗೆಯಾಗುತ್ತದೆ ಮತ್ತು ಮುಂದುವರೆಯುವಂತೆ ತಿಳಿಸಿದರು. ಆಗಲೇ ನಾನು ಸಹಿ ಮಾಡಿದ್ದು" ಎನ್ನುತ್ತಾರೆ ಮನೋರಂಜನ್. 
ಈ ಸಿನೆಮಾದಲ್ಲಿ ಮನೋರಂಜನ್ ತಾಯಿಯ ಚಿತ್ರಕ್ಕೆ ನಂದಕಿಶೋರ್, ಸಿತಾರಾ ಅವರನ್ನು ಕರೆತಂದಿದ್ದಾರೆ. ವಿ ಹರಿಕೃಷ್ಣ ಸಿನೆಮಾಗೆ ಸಂಗೀತ ನೀಡಿದ್ದರೆ, ಸತ್ಯ ಹೆಗಡೆ ಅವರ ಸಿನಿಮಾಟೋಗ್ರಾಫಿ ಚಿತ್ರಕ್ಕಿದೆ. 
ಮನೋರಂಜನ್, ಭರತ್ ನಿರ್ದೇಶನದ ತಮ್ಮ ಮೊದಲನೇ ಚಿತ್ರ 'ಸಾಹೇಬ'ನ ಬಗ್ಗೆ ಮಾತನಾಡಿ "ಇಡೀ ಭಾರತದಲ್ಲಿ ನಗದು ಬಿಕ್ಕಟ್ಟಿದೆ. ನಮ್ಮ ರಂಗಕ್ಕೂ ಈ ತೊಂದರೆ ಇದೆ. ಮುಂದಿನ ವರ್ಷದ ಮೊದಲ ಭಾಗದಲ್ಲಿ ಸಿನೆಮಾ ಬಿಡುಗಡೆಯಾಗಬಹುದು" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.