ಹಿಂಬಾಲಿಸುತ್ತಿದ್ದ ಯುವಕನನ್ನು ಕರೆದು ಅಪ್ಪಿಕೊಂಡ ಬಾಲಿವುಡ್ ನಟಿ ಶ್ರದ್ಧಾ ಕಪೂರ್
ಬಾಲಿವುಡ್ ನಟ ನಟಿಯರಿಗೆ ರಸ್ತೆಗಳಲ್ಲಿ ಹಿಂಬಾಲಿಸುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ರಸ್ತೆಗಳಲ್ಲಿ ಯುವತಿಯರನ್ನು ಹಿಂಪಾಲಿಸುವುದು ಶಿಕ್ಷಾರ್ಹ ಅಪರಾಧ ಎಂಬುದು ಗೊತ್ತಿರಬೇಕಷ್ಟೆ.

Published On :
ನವದೆಹಲಿ: ಬಾಲಿವುಡ್ ನಟ ನಟಿಯರಿಗೆ ರಸ್ತೆಗಳಲ್ಲಿ ಹಿಂಬಾಲಿಸುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ರಸ್ತೆಗಳಲ್ಲಿ ಯುವತಿಯರನ್ನು ಹಿಂಪಾಲಿಸುವುದು ಶಿಕ್ಷಾರ್ಹ ಅಪರಾಧ ಎಂಬುದು ಗೊತ್ತಿರಬೇಕಷ್ಟೆ.
ಆದರೆ ಒಂದು ವಿಶಿಷ್ಟ ಘಟನೆಯಲ್ಲಿ 'ಏಕ್ ವಿಲನ್' ನಟಿ ಶ್ರದ್ಧಾ ಕಪೂರ್ 'ಯಾರೊನ್ ಕಿ ಬಾರಾತ್' ಎಂಬ ಟಿವಿ ವಾಹಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತಮ್ಮನ್ನು ಹಿಂಬಾಲಿಸುತ್ತಿದ್ದ ಯುವಕನನ್ನು ವೇದಿಕೆ ಮೇಲೆ ಕರೆದು ಪರಿಚಯ ಮಾಡಿಕೊಟ್ಟಿದ್ದಾರೆ.
ಸಾಜಿದ್ ಖಾನ್ ಮತ್ತು ರಿತೇಶ್ ದೇಶಮುಖ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಹಿಂಬಾಲಕನ್ನು ಪರಿಚಯಿಸಿದ್ದಲ್ಲದೆ, ವೇದಿಕೆ ಮೇಲೆ ಅವನನ್ನು ತಬ್ಬಿಕೊಂಡಿದ್ದಾರೆ ಕೂಡ!
ಆ ದಿನ ಈ ಹುಡುಗನನ್ನು ೧೭ ನೇ ಬಾರಿಗೆ ನೋಡುತ್ತಿರುವುದಾಗಿ 'ಹೈದರ್' ನಟಿ ವೇದಿಕೆ ಮೇಲೆ ಹೇಳಿದ್ದಾರೆ.
ಈ ಮಧ್ಯೆ ಶ್ರದ್ಧಾ ತಮ್ಮ ಮುಂದಿನ ಚಿತ್ರ ರಾಕ್ ಆನ್ ೨ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನೆಮಾ ನವೆಂಬರ್ ೧೧ ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


