ಸ್ನೇಹಿತ ತರುಣ್ ಸುಧೀರ್ ಗಾಗಿ ಚೌಕ ಸಿನಿಮಾದಲ್ಲಿ ದರ್ಶನ್ ಅಭಿನಯ
ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚೌಕ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿದ್ದಾರೆ....

ಬೆಂಗಳೂರು: ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚೌಕ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿದ್ದಾರೆ.
ಆದರೆ ಈ ಬೆಳವಣಿಗೆಯ ಬಗ್ಗೆ ಪ್ರೊಡಜ್ಞನ್ ಹೌಸ್ ಎಲ್ಲಿಯೂ ತುಟಿ ಬಿಚ್ಚಿಲ್ಲ. ತರುಣ್ ಸುಧೀರ್ ಗಾಗಿ ದರ್ಶನ್ ಚೌಕ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ದರ್ಶನಂ ತಂದೆ ತೂಗುದೀಪ್ ಶ್ರೀನಿವಾಸ್ ಮತ್ತು ತರುಣ್ ತಂದೆ ಸುಧೀರ್ ಹಳೆಯ ಚಿತ್ರಗಳಲ್ಲಿ ಪ್ರಮುಖ ಖಳನಟರುಗಳಾಗಿ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ.
ಅವರಿಬ್ಬರ ಸ್ನೇಹವನ್ನು ಮಕ್ಕಳು ಮುಂದುವರಿಸಿಕೊಂಡು ಬಂದಿದ್ದಾರೆ. ಚೌಕ ಚಿತ್ರದಲ್ಲಿ ದರ್ಶನ್ ಪ್ರಮುಖ ಪಾತ್ರ ನಿರ್ವಹಿಸಲಿದ್ದು, ತುಂಬಾ ಆಸಕ್ತಿದಾಯಕವಾಗಿದೆ.
ಚೌಕ ದ್ವಾರಕೀಶ್ ಅವರ 50 ನೇ ಚಿತ್ರವಾಗಿದ್ದು ಹಲವು ವಿಷಯಗಳಿಂದಾಗಿ ಸುದ್ದಿ ಮಾಡಿದೆ. ವಿಜಯ್ ರಾಘವೇಂದ್ರ, ಪ್ರೇಮ್, ದಿಗಂತ್, ಮತ್ತು ಪ್ರಜ್ವಲ್ ದೇವರಾಜ್ ಪ್ರಿಯಾಮಣಿ, ದೀಪಾ ಸನ್ನಿದಿ ಐಂದ್ರಿತಾ ರೈ ಸೇರಿದಂತೆ ಹಲವು ಪ್ರಮುಖರು ಚಿತ್ರದಲ್ಲಿ ಅಭಿನವಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


