ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಸುಧಾರಾಣಿ ಪುತ್ರಿ ನಿಧಿ ಗೋವರ್ಧನ್
ಕನ್ನಡ ನಟಿ ಸುಧಾರಾಣಿ ಸ್ಯಾಂಡಲ್‌ವುಡ್ ನಲ್ಲಿ ಒಂದು ಕಾಲದಲ್ಲಿ ಬಹುವಾಗಿ ಮಿಂಚಿದ ನಟಿ. ಸುಧಾರಾಣಿ ಅವರು ತೆರೆ ಮೇಲೆ ಅಭಿನಯಿಸಿದ ಒಂದೊಂದು ಪಾತ್ರಗಳು ...

ಮೈಸೂರು : ಕನ್ನಡ ನಟಿ ಸುಧಾರಾಣಿ ಸ್ಯಾಂಡಲ್‌ವುಡ್ ನಲ್ಲಿ ಒಂದು ಕಾಲದಲ್ಲಿ ಬಹುವಾಗಿ ಮಿಂಚಿದ ನಟಿ. ಸುಧಾರಾಣಿ ಅವರು ತೆರೆ ಮೇಲೆ ಅಭಿನಯಿಸಿದ ಒಂದೊಂದು ಪಾತ್ರಗಳು ಇದಿಂಗೂ ಹಾಗೇ ನೆನಪಿನಲ್ಲಿ ಉಳಿಯುತ್ತವೆ. ಇದೀಗ ಸುಧಾರಾಣಿ ಅವರ ಹಾದಿಯಲ್ಲೇ ಮಗಳು ಕೂಡ ಸಾಗುತ್ತಿದ್ದಾಳೆ .
ಸುಧಾರಾಣಿ ಪುತ್ರಿ ಸದ್ದಿಲ್ಲದೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆ ಮೈಸೂರಿನಲ್ಲಿ ನಡೆದ ಮಾಡೆಲಿಂಗ್ ಕಾರ್ಯಕ್ರಮವೊಂದರಲ್ಲಿ ನಿಧಿ ಇದೇ ಮೊದಲ ಬಾರಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ರು. ಓದಿನಲ್ಲೇ ಆಸಕ್ತಿ ತೋರಿದ್ದ ನಿಧಿ ಈಗ ಜಾಹಿರಾತಿನಲ್ಲಿ ಮಿನುಗಿದ್ದಾರೆ. ಸದ್ಯಕ್ಕಿನ್ನೂ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಧಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ. ಓದು ಮುಗಿದ ಬಳಿಕ ನಟನೆ ಬಗ್ಗೆ ಮಾತು ಎನ್ನುತ್ತಾರೆ.
ಇನ್ನು ಮೊದಲ ಬಾರಿಗೆ ರ್ಯಾಂಪ್ ವಾಕ್ ಮಾಡಿದ್ರೂ ನಿಧಿ ಮಾತ್ರ ಸ್ವಲ್ಪಾನೂ ಭಯಪಡಲಿಲ್ಲ. ತುಂಬಾನೇ ಧೈರ್ಯವಾಗಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ನೆರೆದಿದ್ದವರಿಂದ ಶಹಬ್ಬಾಸ್ ಗಿರಿ ಪಡೆದರು. ಮಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದನ್ನು ನೋಡಿ ಸುಧಾರಾಣಿಯಂತೂ ಫುಲ್ ಖುಷಿಯಾಗಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


