ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ಅವರ 'ಪ್ರೇಮ ಬರಹ'

ಈ ಮೊದಲೆ ವರದಿಯಾದಂತೆ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಹಿರಿಯ ಪುತ್ರಿ ಐಶ್ವರ್ಯ ಅರ್ಜುನ್ ಅವರ ಸಿನೆಮಾ ಒಂದನ್ನು ನಿರ್ದೇಶಿಸುವುದಾಗಿ ತಿಳಿದಿತ್ತು.

ಅರ್ಜುನ್ ಸರ್ಜಾ ಅವರ 'ಪ್ರೇಮ ಬರಹ'
ನಟ ಅರ್ಜುನ್ ಸರ್ಜಾಅವರ ಹಿರಿಯ ಪುತ್ರಿ ಐಶ್ವರ್ಯ ಅರ್ಜುನ್
Published On :

ಬೆಂಗಳೂರು: ಈ ಮೊದಲೆ ವರದಿಯಾದಂತೆ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಹಿರಿಯ ಪುತ್ರಿ ಐಶ್ವರ್ಯ ಅರ್ಜುನ್ ಅವರ ಸಿನೆಮಾ ಒಂದನ್ನು ನಿರ್ದೇಶಿಸುವುದಾಗಿ ತಿಳಿದಿತ್ತು. ಈಗ ಆ ಸಿನೆಮಾದ ಚಿತ್ರೀಕರಣ ಈ ತಿಂಗಳಲ್ಲೇ ಪ್ರಾರಂಭವಾಗಲಿದೆಯಂತೆ.

ಅರ್ಜುನ್ ಸರ್ಜಾ ಇನ್ನೂ ಅಧಿಕೃತ ಘೋಷಣೆ ಮಾಡಬೇಕಾಗಿದ್ದರೂ, ವದಂತಿಗಳ ಪ್ರಕಾರ ಮೇ ೨೨ಕ್ಕೆ ಚಲನಚಿತ್ರದ ಮುಹೂರ್ತ ನೆರವೇರಲಿದೆ.

ಇದು ದ್ವಿಭಾಷಾ ಚಲನಚಿತ್ರವಾಗಿದ್ದು ತಮಿಳು ಮತ್ತು ಕನ್ನಡದಲ್ಲಿ ನಿರ್ಮಾಣವಾಗಲಿದೆ. ಕನ್ನಡದಲ್ಲಿ 'ಪ್ರೇಮ ಬರಹ' ಎಂದು ಹೆಸರಿಸಲಾಗಿದೆಯಂತೆ. ಅವರದ್ದೇ ಸಿನೆಮಾ 'ಪ್ರತಾಪ್'ನ, 'ಪ್ರೇಮ ಬರಹ ಕೋಟಿ ತರಹ ಬರೆದರೆ ಮುಗಿಯದ ಕಾವ್ಯ ಇದು'  ಎಂಬ ಹಾಡಿನ ಮೊದಲೆರಡು ಪದಗಳಾಗಿವೆ ಶೀರ್ಷಿಕೆ. ಇದು ಅರ್ಜುನ್ ಸರ್ಜಾ ಅವರ ಅತಿ ಮೆಚ್ಚಿನ ಹಾಡಾಗಿದ್ದು, ಅವರ ಕಾಲರ್ ಟ್ಯೂನ್ ಕೂಡ ಅಂತೆ!

ಈಗ ತಾರಾಗಣದಲ್ಲಿ ಕೆಲವು ಬದಲಾವಣೆಗಳಾಗಿವೆ. ಇದಕ್ಕೂ ಮುಂಚಿತವಾಗಿ ಎರಡೂ ಭಾಷೆಗಳಲ್ಲಿ ಚೇತನ್ ನಾಯಕನಟನಾಗಬೇಕಿತ್ತು ಆದರೆ ಈಗ ನಿರ್ದೇಶಕ ಅವರನ್ನು ಬದಲಿಸಿದ್ದಾರೆ. ಪಾತ್ರದ ಪರಿಕಲ್ಪನೆಯಲ್ಲಿ ಬದಲಾವಣೆಯಾಗಿದ್ದರಿಂದ ಚೇತನ್ ಈ ಸಿನೆಮಾದಿಂದ ಹಿಂದೆ ಸರಿದಿದ್ದಾರಂತೆ. ಅವರ ಬದಲಿಗೆ ಚಂದನ್ ಆಯ್ಕೆಯಾಗಿದ್ದಾರೆ. ಇದು ಚಂದನ್ ಗೆ ತಮಿಳಿನಲ್ಲಿ ಪಾದಾರ್ಪಣೆಯಾಗಲಿದ್ದರೆ, ಐಶ್ವರ್ಯಾಗೆ ಕನ್ನಡ ಸಿನೆಮಾದ ಪಾದಾರ್ಪಣೆಯಾಗಲಿದೆ.

ಚಂದನ್ ಕಿರುತೆರೆಯಿಂದ, ಬೆಳ್ಳಿತೆರೆಗೆ ಜಿಗಿದು ಎರಡು ಮೂರು ಸಿನೆಮಾಗಳಲ್ಲಿ ನಟಿಸಿದ್ದರು ಯಾವುದೂ ನಿರೀಕ್ಷಿತ ಯಸಸ್ಸು ತಂದುಕೊಟ್ಟಿಲ್ಲ. ಅರ್ಜುನ್ ಸರ್ಜಾ ಅವರ ಸ್ವಂತ ಬ್ಯಾನರ್ ಶ್ರೀ ರಾಮ್ ಇಂಟರ್ನ್ಯಾಶನಲ್ ನಡಿ ಈ ಸಿನೆಮಾ ನಿರ್ಮಾಣವಾಗುತ್ತಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.