ಕಾನ್ ಚಿತ್ರೋತ್ಸವ: ನೇರಳೆ ತುಟಿಬಣ್ಣದಿಂದ ಎಲ್ಲರ ಹುಬ್ಬೇರಿಸಿದ ಐಶ್ವರ್ಯ
ಕಾನ್ ಚಿತ್ರೋತ್ಸವಕ್ಕೆ ೧೫ನೆಯ ವರ್ಷ ಭಾಗವಹಿಸುತ್ತಿರುವ ಬಾಲಿವುಡ್ ನಟಿ ಐಶ್ವರ್ಯ ರೈ, ಕೆಂಪು ಹಾಸಿನ ಮೇಲೆ ನಡೆಯುವಾಗ ತಮ್ಮ ನೇರಳೆ ಬಣದ ಲಿಪ್ಸ್ಟಿಕ್ ನಿಂದ ಎಲ್ಲರ ಹುಬ್ಬೇರಿಸುವಂತೆ

ಕಾನ್: ಕಾನ್ ಚಿತ್ರೋತ್ಸವಕ್ಕೆ ೧೫ನೆಯ ವರ್ಷ ಭಾಗವಹಿಸುತ್ತಿರುವ ಬಾಲಿವುಡ್ ನಟಿ ಐಶ್ವರ್ಯ ರೈ, ಕೆಂಪು ಹಾಸಿನ ಮೇಲೆ ನಡೆಯುವಾಗ ತಮ್ಮ ನೇರಳೆ ಬಣದ ಲಿಪ್ಸ್ಟಿಕ್ ನಿಂದ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅವರ ಮುಂದಿನ ಚಿತ್ರ 'ಸರಬ್ಜಿತ್' ಸಿನೆಮಾ ಅಲ್ಲಿ ಪ್ರದರ್ಶನಗೊಂಡಿದೆ.
ಲಾರಿಯಲ್ ಪ್ಯಾರಿಸ್ ಸೌಂದರ್ಯವರ್ಧಕ ಉತ್ಪನ್ನದ ರಾಯಭಾರಿಯಾಗಿ ಭಾಗವಹಿಸುತ್ತಿರುವ ಐಶ್ವರ್ಯ ರೈ, ಕಾನ್ ಸಿನೆಮೋತ್ಸವದಲ್ಲಿ ತಮ್ಮ ಮುಂದಿನ ಚಲನಚಿತ್ರ 'ಸರಬ್ಜಿತ್' ಪ್ರದರ್ಶನದಲ್ಲಿ ಭಾನುವಾರ ಭಾಗವಹಿಸಿದ್ದರು. ಅವರ ಜೊತೆಗೆ ಸಿನೆಮಾದ ನಿರ್ದೇಶಕ ಓಮುಂಗ್ ಕುಮಾರ್, ನಟಿ ರಿಚಾ ಚಡ್ಡ ಮತ್ತು ನಿರ್ಮಾಪಕ ಜಾಕಿ ಭಗನಿ ಕೂಡ ಭಾಗವಹಿಸಿದ್ದರು.
ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ಆರೋಪದ ಮೇಲೆ ತಪ್ಪಿತಸ್ಥನೆಂದು ಶಿಕ್ಷೆಕೆ ಗುರಿಯಾಗಿದ್ದ ಭಾರತೀಯ ರೈತ ಸರಬ್ಜಿತ್ ಸಿಂಗ್ ಅವರ ಕುರಿತಾದ ಸಿನೆಮಾ ಇದು. ಏಪ್ರಿಲ್ ೨೦೧೩ರಲ್ಲಿ ಲಾಹೋರ್ ಜೈಲಿನಲ್ಲಿ ಇತರ ಖೈದಿಗಳು ಸರಬ್ಜಿತ್ ಮೇಲೆ ಹಲ್ಲೆ ನಡೆಸಿ ಕೊಂದಿದ್ದರು. ರಣದೀಪ್ ಹೂಡ ಸರಬ್ಜಿತ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಸರಬ್ಜಿತ್ ಸಹೋದರಿ ದಲ್ಬೀರ್ ಕೌರ್ ಅವರ ದೃಷ್ಟಿಯಲ್ಲಿ ಸಿನೆಮಾವನ್ನು ನಿರೂಪಿಸಲಾಗಿದ್ದು, ಈ ಪಾತ್ರವನ್ನು ಐಶ್ವರ್ಯ ನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


