ಸಿನಿಮಾ ಸುದ್ದಿ

ದ್ವಿಪಾತ್ರದಲ್ಲಿ ಅಭಿನಯಿಸುವುದೆಂದರೆ ಎರಡು ಸಿನೆಮಾಗಳಲ್ಲಿ ನಟಿಸಿದಂತೆ: ಗಣೇಶ್

'ಸ್ಟೈಲ್ ಕಿಂಗ್' ೨೦೧೬ರ ಗಣೇಶ್ ಅವರ ಮೊದಲ ಚಿತ್ರವಾಗಿದ್ದು, ಮೊದಲ ಬಾರಿಗೆ ನಟ ದ್ವಿಪಾತ್ರದಲ್ಲಿ ನಟಿಸಿರುವುದು ವಿಶೇಷ.

ದ್ವಿಪಾತ್ರದಲ್ಲಿ ಅಭಿನಯಿಸುವುದೆಂದರೆ ಎರಡು ಸಿನೆಮಾಗಳಲ್ಲಿ ನಟಿಸಿದಂತೆ: ಗಣೇಶ್
ಗಣೇಶ್
Published On :

ಬೆಂಗಳೂರು: 'ಸ್ಟೈಲ್ ಕಿಂಗ್' ೨೦೧೬ರ ಗಣೇಶ್ ಅವರ ಮೊದಲ ಚಿತ್ರವಾಗಿದ್ದು, ಮೊದಲ ಬಾರಿಗೆ ನಟ ದ್ವಿಪಾತ್ರದಲ್ಲಿ ನಟಿಸಿರುವುದು ವಿಶೇಷ.

ಇದು ತಮಗೆ ಏಕೆ ವಿಶೇಷ ಎಂದು ವಿವರಿಸುವ ಗಣೇಶ್ "ದ್ವಿಪಾತ್ರದಲ್ಲಿ ಅಭಿನಯಿಸುವುದೆಂದರೆ ಎರಡು ಸಿನೆಮಾಗಳಲ್ಲಿ ನಟಿಸಿದಂತೆ. ಸ್ಕ್ರೀನ್ ಮೇಲೆ ಎರಡು ಅವತಾರಗಳಲ್ಲಿ ನಾನು ಕಾಣಿಸಿಕೊಳ್ಳುವುದು ಥ್ರಿಲ್ ಅನುಭವ. ಮನರಂಜಿಸುವ ಹಳೆ ಗಣೇಶ್ ಕೂಡ ಇದ್ದಾನೆ ಮತ್ತು ಮಾಫಿಯಾ ನೋಟ ಹೊಸ ಗಣೇಶ್ ಕೂಡ ಇದ್ದಾನೆ. ಇದು 'ಸ್ಟೈಲ್ ಕಿಂಗ್'ನ ಮುಖ್ಯಾಂಶ. ಇದೊಂದು ಪ್ರಯೋಗ, ಅದಕ್ಕಾಗಿ ಮಾನಸಿಕವಾಗಿ ದೈಹಿಕವಾಗಿ ಹೆಚ್ಚಿನ ಶ್ರಮ ಬೇಡಿತ್ತು ಮತ್ತು ಹೆಚ್ಚು ಸಮಯ ಹಿಡಿಯಿತು. ಇದಕ್ಕೆ ಬೇರೆಯದ್ದೇ ರೀತಿಯ ಆಂಗಿಕ ಭಾಷೆಯ ಅಗತ್ಯ ಇತ್ತು" ಎನ್ನುತ್ತಾರೆ.

ಹಲವಾರು ಕಾರಣಗಳಿಗೆ ಸಿನೆಮಾ ವಿಳಂಬವಾಗಿದ್ದರೂ ಈ ವಿಶಿಷ್ಟ ಸಿನೆಮಾ ಹೊರತರುವಲ್ಲಿ ಪಿ ಸಿ ಶೇಖರ್ ಯಶಸ್ವಿಯಾಗಿರುವುದಕ್ಕೆ ಹರ್ಷ ವ್ಯಕ್ತ ಪಡಿಸುವ ಗಣೇಶ್ "ಕಥೆಯಲ್ಲಿ ವಿಶಿಷ್ಟತೆ ಇದ್ದರೆ ಮಾತ್ರ ಸಿನೆಮಾದ ಪಾತ್ರವಾಗುವೆನೆಂದು ಹಿಂದೆ ಶೇಖರ್ ಅವರಿಗೆ ತಿಳಿಸಿದ್ದೆ. ಅವರು ಆ ನಂಬಿಕೆಯನ್ನು ಉಳಿಸಿದ್ದಾರೆ" ಅನ್ನುತ್ತಾರೆ.

ಗಣೇಶ್ ಸದ್ಯಕ್ಕೆ 'ಮುಂಗಾರು ಮಳೆ-೨' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.