ಯೂಟ್ಯೂಬ್ ನಲ್ಲಿ ರಜನಿಕಾಂತ್ ಹವಾ, ಕಬಾಲಿ ಚಿತ್ರದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಪಂಚದಾದ್ಯಂತ...

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಪಂಚದಾದ್ಯಂತ ವೈರಲ್ ಆಗಿದೆ. ಬಿಡುಗಡೆಯಾದ ಒಂದು ಗಂಟೆಯೊಳಗೆ ಒಂದು ಲಕ್ಷ ಲೈಕ್ ಪಡೆದು ಹೊಸ ಹವಾ ಕ್ರಿಯೆಟ್ ಮಾಡುತ್ತಿದೆ.
ಭಾನುವಾರ 11 ಗಂಟೆಗೆ ನಿರ್ಮಾಪಕ ಕಲೈಪ್ಪುಲಿ ಎಸ್ ತನು ಯೂಟ್ಯೂಬ್‌ಗೆ ಕಬಾಲಿ ಟೀಸರ್ ಬಿಡುಗಡೆ ಮಾಡಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಬಿಡುಗಡೆಗೊಂಡ 22 ಗಂಟೆಗಳೊಳಗೆ ನಾಲ್ಕು ಮಿಲಿಯನ್(40 ಲಕ್ಷ) ಜನ ವೀಕ್ಷಿಸಿದ್ದು, ಎರಡು ಲಕ್ಷ ಲೈಕ್ಸ್ ಸಿಕ್ಕಿದೆ.
ರಜನಿ ಪವರ್ ಅಂದ್ರೆ ಇದೇ ನೋಡಿ ಅಂತಾ ಮಾತಾಡ್ತಿದ್ದಾರೆ ಜನ. ಕಬಾಲಿ ಒಂದು ಪಕ್ಕಾ ರಜನಿ ಸ್ಟೈಲ್ ಸಿನಿಮಾ. ರಜನಿ ಡೈಲಾಗ್, ಸ್ಟೈಲ್, ಮ್ಯಾನರಿಸಂ ಎಲ್ಲವನ್ನೂ ಇದರಲ್ಲಿ ಅತ್ಯುತ್ತಮವಾಗಿ ಬಳಸಿಕೊಳ್ಳಲಾಗಿದೆ. ಇನ್ನು ಚಿತ್ರದಲ್ಲಿ ಕನ್ನಡದ ಕಿಶೋರ್, ರಾಧಿಕ ಆಪ್ಟೆ, ದನ್ಷಿಕ, ಕಲೈರಸ್, ದಿನೇಶ್ ಮತ್ತು ಜಾನ್ ವಿಜಯ್ ನಟಿಸಿದ್ದಾರೆ. ಚಿತ್ರವನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


