'ಊರ್ವಿ' ಸಿನೆಮಾಗೆ ನಾಯಕನಾಗಿ ಮಧುಕರ್ ನಿಯೋಗಿ ಆಯ್ಕೆ
೨೦೧೪ರಲ್ಲಿ ಬಂದಂತೆ ಕಾಣೆಯಾಗಿದ್ದ 'ಕ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಮಧುಕರ್ ನಿಯೋಗಿ, ನಂತರ ಸಹ ನಿರ್ದೇಶಕ, ಸ್ಕ್ರಿಪ್ಟ್ ಬರಹಗಾರರಾಗಿ ತೊಡಗಿಸಿಕೊಂಡವರು.

ಬೆಂಗಳೂರು: ೨೦೧೪ರಲ್ಲಿ ಬಂದಂತೆ ಕಾಣೆಯಾಗಿದ್ದ 'ಕ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಮಧುಕರ್ ನಿಯೋಗಿ, ನಂತರ ಸಹ ನಿರ್ದೇಶಕ, ಸ್ಕ್ರಿಪ್ಟ್ ಬರಹಗಾರರಾಗಿ ತೊಡಗಿಸಿಕೊಂಡವರು. ಐದು ಭಾರತಿಯ ಭಾಷೆಗಳನ್ನು ನುರಿತಿರುವ ಈ ಮಾಜಿ ಸಾಫ್ಟ್ವೇರ್ ಎಂಜಿನಿಯರ್ ಗೆ ಮತ್ತೆ ನಟನೆಯ ಅದೃಷ್ಟ ಒಲಿದು ಬಂದಿದೆ.
ಕನ್ನಡ ಚಿತ್ರೋದ್ಯಮಕ್ಕೆ ನಟನಾಗಲು ಬಂದಿದ್ದು ಎಂದು ಆತ್ಮವಿಶ್ವಾಸದಿಂದ ನುಡಿಯುವ ಮಧು "ಆರೋಗ್ಯಕರ ಸ್ವ-ಗೌರವ ಗಳಿಸುವುದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಇಲ್ಲಿಗೆ ಹಲವರು ಹಿರೋ ಆಗಲು ಬರುತ್ತಾರೆ ಆದರೆ ನಾನಿಲ್ಲಿರುವುದು ನಟನಾಗಿರಲು. ಎರಡರ ಮಧ್ಯೆ ಬಹಳ ವ್ಯತ್ಯಾಸ ಇದೆ. ಹಿರೋ ಜೀವನಕ್ಕಿಂತಲೂ ದೊಡ್ಡದಾಗಿ ಕಾಣಿಸಿ ಸ್ಫೂರ್ತಿ ನೀಡಬಲ್ಲವನಾದರೂ, ಸಾಮಾನ್ಯ ಮನುಷ್ಯನಿಗೆ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾನು ಹೆಚ್ಚೆಚ್ಚು ಪಾತ್ರಗಳನ್ನು ಮಾಡಿ, ನಟನೆಯಲ್ಲೇ ನನನ್ನು ಕಂಡೂಕೊಳ್ಳಬೇಕೆಂದಿದ್ದೇನೆ" ಎನ್ನುತ್ತಾರೆ.
ನೈಜ ಸಿನೆಮಾದ ಪಾತ್ರವಾಗುವ ಬಯಕೆ ಹೊಂದಿರುವ ನಟ, ಊರ್ವಿ ಸಿನೆಮಾದಲ್ಲಿ ಪ್ರಧಾನ ಪಾತ್ರವನ್ನು ಗಳಿಸಿದ್ದಾರೆ. ಪ್ರದೀಪ್ ವರ್ಮಾ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಸಿನೆಮಾದಲ್ಲಿ ನಾಯಕ ನಟಿಯರ ದಂಡೆ ಇದೆ. ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಎಲ್ಲರು ಸಿನೆಮಾದಲ್ಲಿದ್ದಾರೆ.
ವಾಣಿಜ್ಯಾತ್ಮಕ ಸಿನೆಮಾ ಮತ್ತು ನೈಜ ಸಿನೆಮಾಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳುವ ಮಧು "ವಾಣಿಜ್ಯ ಸಿನೆಮಾಗಳು ಕೂಡ ಒಳ್ಳೆಯ ಯೋಜನೆಗಳೇ, ಅವುಗಳಲ್ಲಿ ಅವಕಾಶ ಸಿಕ್ಕರೆ ಆಗ ಚಿಂತಿಸುತ್ತೇನೆ ಆದರೆ ಸದ್ಯಕ್ಕೆ ಸಾಮಾನ್ಯರನ್ನು ತಟ್ಟಬಲ್ಲ ನೈಜ ಸಿನೆಮಾದತ್ತ ನನ್ನ ಚಿತ್ತ. ಚಿತ್ರೋದ್ಯಮದಲ್ಲಿ ಬೆಳೆಯುತ್ತಾ ಹೋದಂತೆ ನನ್ನ ನಿಲುವುಗಳು ಬದಲಾಗಬಹುದು" ಎನ್ನುತ್ತಾರೆ.
ಮಿ & ಮಿಸಸ್ ರಾಮಾಚಾರಿಯಲ್ಲಿ ಸಂತೋಶ್ ಆನಂದರಾಮ್ ಅವರ ಜೊತೆ ಸಹನಿರ್ದೇಶಕರಾಗಿದ್ದ ಮಧು, ಆಗ ಪ್ರದೀಪ್ ಜೊತೆಗೂ ಸಂಪರ್ಕದಲ್ಲಿದ್ದರಂತೆ "ನಾನು ಅವರ ಜೊತೆ ಸೇರಿ ಒಂದು ಸ್ಕ್ರೀನ್ ಪ್ಲೇ ಬರೆದೆ. ಆದರೆ ಅದಿನ್ನೂ ಪ್ರಾರಂಭವಾಗಬೇಕು. ಈ ಮಧ್ಯೆ ಅವರಿಗೆ ನಿರ್ದೇಶನದ ಅವಕಾಶ ಸಿಕ್ಕಿತು. ಈಗ ಅವರಿಗೆ ಸಹ ನಿರ್ದೇಶಕನಾಗಿಯೂ ಮತ್ತು ಅದೇ ಸಿನೆಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಕ್ರಾಂತಿಕಾರಿ ಕಲಾವಿದನ ಪಾತ್ರವಿದು. ನಾನಿದಕ್ಕೆ ತಕ್ಕವನು ಎಂದೆನಿಸಿತು ಅವರಿಗೆ" ಎಂದು 'ಊರ್ವಿ' ಸಿನೆಮಾದ ಬಗ್ಗೆ ತಿಳಿಸುತ್ತಾರೆ.
ಹತ್ತು ಹಲವು ಕೆಲಸಗಳನ್ನು ಹಚ್ಚಿಕೊಂಡಿರುವ ಅವರು ಬಾಲಿವುಡ್ ಸಿನೆಮಾದಲ್ಲಿ ಕೂಡ ಆಡಿಶನ್ ನೀಡಿದ್ದಾರಂತೆ. "ಅದರ ಫಲಿತಾಂಶ ಇನ್ನೂ ತಿಳಿಯಬೇಕಿದೆ. 'ಊರ್ವಿ' ಮುಗಿಸಿದ ನಂತರ ಚೈನಾದಲ್ಲಿ ನಾಟಕವೊಂದಿದೆ. ನಂತರ ಇನ್ನಷ್ಟು ಯೋಜನೆಗಳಿಗೆ ಆಡಿಶನ್ ನೀಡುತ್ತೇನೆ. ನಾನಿನ್ನೂ ಹೊಸಬ. ಸಿನೆಮಾದ ಎಲ್ಲ ವಿಭಾಗಗಳಲ್ಲೂ ಕಲಿಯುವುದು ಸಾಕಷ್ಟಿದೆ. ನಟನೆ ನನ್ನ ಆಯ್ಕೆ, ಆದರೆ ಸಿನೆಮಾದ ವಿವಿಧ ಆಯಾಮಗಳನ್ನು ತಿಳಿಯಲು ನಿರ್ದೇಶನ ಆಯ್ಕೆ ಮಾಡಿಕೊಂಡೆ" ಎನ್ನುತ್ತಾರೆ ಮಧುಕರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


