ಸಿನಿಮಾ ಸುದ್ದಿ

'ಯು-ಟರ್ನ್' ತಮಿಳು-ತೆಲುಗು ರಿಮೇಕ್ ನಲ್ಲಿ ಸಮಂತ?

ತಮ್ಮ ಆರು ವರ್ಷಗಳ ಅನುಭವದಲ್ಲಿ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ತಳವೂರಿರುವ ಸಮಂತ ರುತ್ ಪ್ರಭು, ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ನ ತಮಿಳು ಮತ್ತು ತೆಲುಗು ರಿಮೇಕ್

'ಯು-ಟರ್ನ್' ತಮಿಳು-ತೆಲುಗು ರಿಮೇಕ್ ನಲ್ಲಿ ಸಮಂತ?
ನಿರ್ದೇಶಕ ಪವನ್ ಕುಮಾರ್ ಜೊತೆಗೆ ನಟಿ ಸಮಂತ, ನಟ ನಾಗ ಚೈತನ್ಯ ಮತ್ತು ಸಿನೆಮ್ಯಾಟೋಗ್ರಾಫರ್ ಅಧ್ವೈತ
Published On :

ಬೆಂಗಳೂರು: ತಮ್ಮ ಆರು ವರ್ಷಗಳ ಅನುಭವದಲ್ಲಿ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ತಳವೂರಿರುವ ಸಮಂತ ರುತ್ ಪ್ರಭು, ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ನ ತಮಿಳು ಮತ್ತು ತೆಲುಗು ರಿಮೇಕ್ ಗಳಲ್ಲಿ ನಟಿಸಲು ಆಸಕ್ತಿ ತೋರಿದ್ದಾರಂತೆ.

ಮಾರ್ಚ್ ೧೮ ರಂದು ಬೆಂಗಳೂರಿನಲ್ಲಿದ್ದ ನಟಿ, 'ಯು-ಟರ್ನ್' ಸಿನೆಮಾ ನೋಡಿದ್ದಾರೆ. ಇವರ ಜೊತೆಗೆ ನಟ ನಾಗ ಚೈತನ್ಯ ಕೂಡ ಇದ್ದರಂತೆ. ಇದನ್ನು ಧೃಢೀಕರಿಸಿದ ಪವನ್ "ಟ್ರೇಲರ್ ನೋಡಿದ ಮೇಲೆ ಸಮಂತ ನನ್ನ ಜೊತೆಗೆ ಮಾತನಾಡಿದರು. ಅವರು ಸ್ಕ್ರಿಪ್ಟ್ ಓದಿದ ಮೇಲೆ ಈಗ ಸಿನೆಮಾದ ಪ್ರಿವ್ಯೂ ಕೂಡ ವೀಕ್ಷಿಸಿದ್ದಾರೆ. ಈಗ ಇದನ್ನು ರಿಮೇಕ್ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೇವೆ" ಎನ್ನುತ್ತಾರೆ.

ನಾಗ ಚೈತನ್ಯ ತಮ್ಮ ಹಿಂದಿನ ಸಿನೆಮಾ 'ಲೂಸಿಯಾ'ದ ಅಭಿಮಾನಿಯಾಗಿರುವುದರಿಂದ ಅವರು ಸಮಂತಾ ಜೊತೆಗೆ ಬಂದು ಸಿನೆಮಾ ವೀಕ್ಷಿಸಿದರು ಎಂದು ತಿಳಿಸುತ್ತಾರೆ ಪವನ್.

ನಿರ್ದೇಶಕ ಈಗ 'ಯು-ಟರ್ನ್' ನಿರ್ಮಾಪಕರ ಜೊತೆ ತೆಲುಗು ಮತ್ತು ತಮಿಳು ರಿಮೇಕ್ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದಾರಂತೆ. "ಸಮಂತ ನಮ್ಮ ಕನ್ನಡ ಸಿನೆಮಾವನ್ನು ತಮಿಳು ಮತ್ತು ತೆಲುಗಿನಲ್ಲಿ ಮಾಡಲು ಆಸಕ್ತಿ ತೋರಿರುವುದು ಒಳ್ಳೆಯ ಸುದ್ದಿ. ಆದರೆ, ನಮಗೆ ನಿರ್ಮಾಪಕರು ಸಿಗಬೇಕು. ಎಲ್ಲವೂ ಅಂತಿಮವಾದ ಮೇಲಷ್ಟೇ ನಾನು ಅಧಿಕೃತವಾಗಿ ಘೋಷಣೆ ಮಾಡಲು ಸಾಧ್ಯ" ಎಂದಿದ್ದಾರೆ ಪವನ್.

ಶ್ರದ್ಧಾ ಶ್ರೀನಾಥ್, ದಿಲೀಪ್ ರಾಜ್ ಸಿನೆಮಾದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.