'ಪುಷ್ಪಕ ವಿಮಾನ'ದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಮರಳಿದ ಜೂಹಿ ಚಾವ್ಲಾ
ರವಿಚಂದ್ರನ್ ಅವರ 'ಪ್ರೇಮಲೋಕ' ಕನ್ನಡ ಸಿನೆಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಜೂಹಿ ಚಾವ್ಲಾ ಈಗ 'ಪುಷ್ಪಕ ವಿಮಾನ' ಸಿನೆಮಾದ ಮೂಲಕ ಮತ್ತೆ

ಬೆಂಗಳೂರು: ರವಿಚಂದ್ರನ್ ಅವರ 'ಪ್ರೇಮಲೋಕ' ಕನ್ನಡ ಸಿನೆಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಜೂಹಿ ಚಾವ್ಲಾ ಈಗ 'ಪುಷ್ಪಕ ವಿಮಾನ' ಸಿನೆಮಾದ ಮೂಲಕ ಮತ್ತೆ ಕನ್ನಡ ಚಿತ್ರೋದ್ಯಮಕ್ಕೆ ಮರಳಿದ್ದಾರೆ.
ಏಪ್ರಿಲ್ ೪ ರಿಂದ ೬ ರವರೆಗೆ ಜೂಹಿ ಬೆಂಗಳೂರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದು, ಅದರಲ್ಲಿ ಒಂದು ವಿಶೇಷ ಹಾಡಿನ ಚಿತ್ರೀಕರಣವೂ ಸೇರಿದೆಯಂತೆ. 'ಪುಷ್ಪಕ ವಿಮಾನ'ದ ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್ ಈ ವಿಷಯ ಧೃಢೀಕರಿಸಿದ್ದು, "ಸೆಟ್ ಏರಿಸಲು ವಿಶಾಲವಾದ ಪ್ರದೇಶವನ್ನು ಹುಡುಕುತ್ತಿದ್ದೇವೆ. ಬಾಲಿವುಡ್ ನಟಿಯ ಜೊತೆಗೆ ಈ ವಿಶೇಷ ಹಾಡಿನ ಚಿತ್ರೀಕರಣ ನಡೆಯಲಿದೆ. ಅವರ ಜೊತೆ ೮೦ ಜನ ಕಿರಿಯ ನೃತ್ಯಗಾರ್ತಿಯರು ಪಾಲ್ಗೊಳ್ಳಲಿದ್ದಾರೆ" ಎಂದು ವಿವರಿಸುತ್ತಾರೆ.
ಎಸ್ ರವಿಂದ್ರನಾಥ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನೆಮಾದಲ್ಲಿ ರಮೇಶ್ ಅರವಿಂದ್, ರಚಿತಾ ರಾಮ್ ಮತ್ತು ಬಾಲನಟಿ ಯುವಿನಾ ಪಾರ್ಥಿವ ನಟಿಸುತ್ತಿದ್ದಾರೆ. ಗುರುಪ್ರಸಾದ್ ಸಿನೆಮಾಗೆ ಸಂಭಾಷಣೆ ಬರೆದಿದ್ದು, ಭುವನ್ ಗೌಡ ಅವರದ್ದು ಸಿನೆಮ್ಯಾಟೋಗ್ರಫಿ ಮತ್ತು ಚರಣ್ ರಾಜ್ ಸಂಗೀತ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


