ಸಿನಿಮಾ ಸುದ್ದಿ

ಸಪ್ತಪದಿ ತುಳಿದ ರಂಗಿತರಂಗ ಸಿನಿಮಾ ಹೀರೋ ನಿರೂಪ್ ಭಂಡಾರಿ

ರಂಗಿತರಂಗ ಚಿತ್ರದ ನಟ ನಿರೂಪ್ ಭಂಡಾರಿ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮೂಲದ ಯುವತಿ ಧನ್ಯಾ ಅವರ ...

ಸಪ್ತಪದಿ ತುಳಿದ ರಂಗಿತರಂಗ ಸಿನಿಮಾ ಹೀರೋ ನಿರೂಪ್  ಭಂಡಾರಿ
ನಿರೂಪ್ ಭಂಡಾರಿ
Published On :

ಬೆಂಗಳೂರು: ರಂಗಿತರಂಗ ಚಿತ್ರದ ನಟ ನಿರೂಪ್  ಭಂಡಾರಿ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮೂಲದ ಯುವತಿ ಧನ್ಯಾ ಅವರ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಾರೆ.

ರಂಗಿತರಂಗ ಚಿತ್ರದ ಮೂಲಕ ಚಿರಪರಿಚಿತರಾಗಿದ್ದ ಮಂಗಳೂರು ಮೂಲದ ನಟ ನಿರೂಪ್  ಭಂಡಾರಿ ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಿನ್ನೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮೈಸೂರು ಮೂಲದ ಧನ್ಯಾ ಎಂಬ ಹುಡುಗಿ ಕೈ ಹಿಡಿದಿರುವ ನಿರೂಪ್  ಭಂಡಾರಿ ತಮ್ಮ ಬ್ಯಾಚುಲರ್ ಜೀವನಕ್ಕೆ ಗುಡ್‌ಬೈ ಹೇಳಿದ್ದಾರೆ.

ನಿರೂಪ್  ಭಂಡಾರಿಯವರ ಮದುವೆ ಸಮಾರಂಭಕ್ಕೆ ಸಿನಿಮಾ ಇಂಡಸ್ಟ್ರಿಯ ಕೆಲವೇ ಮಂದಿಯನ್ನು ಆಹ್ವಾನಿಸಲಾಗಿತ್ತು. ಡೈಲಾಗ್‌ ಕಿಂಗ್‌ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್, ಸಾಯಿಕುಮಾರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ನವದಂಪತಿಗೆ ಶುಭ ಕೋರಿದ್ದು ಮಾತ್ರವಲ್ಲದೆ ಶಾಸಕರು ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.