ಆತ್ಮಕತೆ ಬರೆದ ರಜನಿಕಾಂತ್ ಪುತ್ರಿ ಐಶ್ವರ್ಯ
ನಿರ್ದೇಶಕಿ-ನಿರ್ಮಾಪಕಿ ಐಶ್ವರ್ಯ ಆರ್ ಧನುಶ್, 'ಸ್ಟಾಂಡಿಂಗ್ ಆನ್ ಎನ್ ಆಪಲ್ ಬಾಕ್ಸ್' ಆತ್ಮಕತೆ ಬರೆದಿದ್ದು ಬಿಡುಗಡೆಗೆ ಸಿದ್ಧರಾಗಿದ್ದಾರೆ

ಚೆನ್ನೈ: ನಿರ್ದೇಶಕಿ-ನಿರ್ಮಾಪಕಿ ಐಶ್ವರ್ಯ ಆರ್ ಧನುಶ್, 'ಸ್ಟಾಂಡಿಂಗ್ ಆನ್ ಎನ್ ಆಪಲ್ ಬಾಕ್ಸ್' ಆತ್ಮಕತೆ ಬರೆದಿದ್ದು ಬಿಡುಗಡೆಗೆ ಸಿದ್ಧರಾಗಿದ್ದಾರೆ.
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಮತ್ತು ತಮಿಳು ನಟ ಧನುಶ್ ಅವರ ಪತ್ನಿ, ತಾರೆಯ ಮಗಳಾಗಿ, ಸ್ಟಾರ್ ಪತ್ನಿಯಾಗಿ, ನಿರ್ಮಾಪಕಿ-ನಿರ್ದೇಶಕಿಯಾಗಿ ಮತ್ತು ತಾಯಿಯಾಗಿ ತಮ್ಮ ಜೀವನವನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ.
ತಮ್ಮ ಜೀವನದಲ್ಲಿ ನಡೆದ ಘಟನೆಗಳು, ಆಸಕ್ತಿದಾಯಕ ಸನ್ನಿವೇಶಗಳನ್ನು ಪುಸ್ತಕ ಹಿಡಿದಿಡಲಿದೆಯಂತೆ.
"ಹೌದು. ನಿಜ ನಾನು ಆತ್ಮಕತೆ ಬರೆದಿದ್ದೇನೆ. ಈ ವರ್ಷದ ಕೊನೆಗೆ ಹೊರಬರುವ ಸಾಧ್ಯತೆಯಿದೆ. ಇದು ನನ್ನ ಮೊದಲನೆಯ ಪುಸ್ತಕವಾಗಿದ್ದು, ಓದುಗರಿಗೆ ನನ್ನ ವೈಯಕ್ತಿಕ ಜೀವನದ ಮತ್ತು ಘಟನೆಗಳ ವಿವರಗಳು ಸಿಗಲಿವೆ" ಎಂದು ಐಶ್ವರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾನು ಸಾಮಾನ್ಯವಾಗಿ ಮೌನ ಸ್ವಭಾವದವಳು ಆದುದರಿಂದ ಜೀವನದ ಘಟನೆಗಳ ಜೊತೆಗೆ ತಾತ್ವಿಕ ಆಯಾಮಗಳನ್ನು, ಭಾವನೆಗಳ ಮಿಶ್ರಣಗಳನ್ನು, ಏರಿಳಿತಗಳನ್ನು ಪುಸ್ತಕದಲ್ಲಿ ದಾಖಲು ಮಾಡಲು ಪ್ರತ್ನಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


