ಸಿನಿಮಾ ಸುದ್ದಿ

ದರ್ಶನ್ ವಿರುದ್ಧ ಪತ್ನಿ ವಿಜಯಲಕ್ಷ್ಮಿ ದೂರು ಪ್ರಕರಣಕ್ಕೆ ಅಂಬರೀಷ್ ಎಂಟ್ರಿ

ನಟ ದರ್ಶನ್ ದಾಂಪತ್ಯದಲ್ಲಿ ಮೂಡಿರುವ ಬಿರುಕಿನ ಸಂಬಂಧ ಮಂಡ್ಯದಲ್ಲಿ ನಟ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ...

ದರ್ಶನ್ ವಿರುದ್ಧ ಪತ್ನಿ ವಿಜಯಲಕ್ಷ್ಮಿ ದೂರು ಪ್ರಕರಣಕ್ಕೆ ಅಂಬರೀಷ್ ಎಂಟ್ರಿ
ನಟ ದರ್ಶನ್ ಮತ್ತು ಅಂಬರೀಷ್
Published On :

ಮಂಡ್ಯ: ನಟ ದರ್ಶನ್ ದಾಂಪತ್ಯದಲ್ಲಿ ಮೂಡಿರುವ ಬಿರುಕಿನ ಸಂಬಂಧ ಮಂಡ್ಯದಲ್ಲಿ ನಟ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಚಾರ ತಿಳಿದ ತಕ್ಷಣ ನಾನು ದರ್ಶನ್ ಜೊತೆ ಮೊಬೈಲ್ ನಲ್ಲಿ ಮಾತನಾಡಿದೆ, ಆದರೆ ಎಲ್ಲಾ ವಿಷಯವನ್ನು ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ದರ್ಶನ್ ಫೋನ್ ಇಟ್ಟ. ಯಾಕೆ ಹೀಗಾಯ್ತು ಎಂಬ ಮಾಹಿತಿ ತಿಳಿದಿಲ್ಲ ಎಂದು ಅಂಬರೀಷ್ ಹೇಳಿದ್ದಾರೆ.

ಮೊದಲು ದರ್ಶನ್ ಜೊತೆ ನಾನು ಚರ್ಚಿಸುತ್ತೇನೆ. ನಂತರ ನಾಳೆಯೊಳಗೆ ದರ್ಶನ್ ಮತ್ತು ಆವರ ಪತ್ನಿಯನ್ನು ಕರೆಸಿ ಮಾತನಾಡುವುದಾಗಿ ಅಂಬರೀಷ್ ಹೇಳಿದ್ದಾರೆ. ಗಲಾಟೆ ಬಗ್ಗೆ ಕೇಳಿದರೇ ನಾನು ಏನು ಹೇಳಲಿ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ 2011 ರಲ್ಲಿ ನಟ ದರ್ಶನ್ ವಿರುದ್ಧ ಪತ್ನಿ ವಿಜಯಲಕ್ಷ್ಮಿ ದೂರು ದಾಖಲಿಸಿದ್ದ ವೇಳೆ ಅಂಬರೀಷ್ ಇಬ್ಬರ ನಡುವೆ ಸಂಧಾನ ನಡೆಸಿ ವಿಜಯಲಕ್ಷ್ಮಿ ಅವರಿಂದ ದರ್ಶನ್ ವಿರುದ್ಧದ ದೂರು ವಾಪಸ್ ಪಡೆಸಿ, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.