ಎಸ್ಐಐಎಂಎ ಅವಾರ್ಡ್ಸ್ 2016: ಉಪ್ಪಿ ಅತ್ಯುತ್ತಮ ನಿರ್ದೇಶಕ, ಪುನೀತ್, ರಚಿತಾ ಶ್ರೇಷ್ಠ ನಟ-ನಟಿ
2016ರ ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಅವಾರ್ಡ್(ಎಸ್ಐಐಎಂಎ) ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸಿಂಗಾಪುರದಲ್ಲಿ ನಡೆಯುತ್ತಿದೆ.

2016ರ ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಅವಾರ್ಡ್(ಎಸ್ಐಐಎಂಎ) ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸಿಂಗಾಪುರದ ಸನ್ಟೇಕ್ ಕನ್ವೇನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್ ನಲ್ಲಿ ನಡೆಯುತ್ತಿದ್ದು ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ರಣವಿಕ್ರಮ ಚಿತ್ರದ ಅಭಿನಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯತ್ತಮ ನಟ ಪ್ರಶಸ್ತಿ ಪಡೆದರೇ, ರನ್ನ ಚಿತ್ರದ ನಟನೆಗಾಗಿ ರಚಿತಾ ರಾಂ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಗಿರಿರಾಜ್ ನಿರ್ದೇಶನದ ಮೈತ್ರಿ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಉಪ್ಪಿ 2 ಚಿತ್ರದ ನಿರ್ದೇಶನಕ್ಕಾಗಿ ಉಪೇಂದ್ರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ.
2016ರ ಸಿಮಾ ಪ್ರಶಸ್ತಿ ಪಡೆದ ಕನ್ನಡದ ಚಿತ್ರಗಳು
* ಅತ್ಯುತ್ತಮ ನಿರ್ದೇಶಕ: ಉಪೇಂದ್ರ(ಉಪ್ಪಿ 2)
* ಅತ್ಯತ್ತಮ ನಟ: ಪುನೀತ್ ರಾಜ್ ಕುಮಾರ್(ರಣವಿಕ್ರಮ)
* ಅತ್ಯುತ್ತಮ ನಟಿ: ರಚಿತಾ ರಾಂ(ರನ್ನ)
* ಅತ್ಯುತ್ತಮ ಪೋಷಕ ನಟ: ಪನ್ನಗ ಭರಣ(ಕೆಂಡಸಂಪಿಗೆ)
* ಅತ್ತುತ್ತಮ ಪೋಷಕ ನಟಿ: ತೇಜಸ್ವಿನಿ ಪ್ರಕಾಶ್(ಗೂಳಿಹಟ್ಟಿ)
* ಅತ್ಯುತ್ತಮ ಖಳ ನಟ: ಸಾಯಿಕುಮಾರ್(ರಂಗಿತರಂಗ)
* ಉತ್ತಮ ಸಾಯಿತ್ಯ: ಅನೂಪ್ ಬಂಡಾರಿ ಈ ಸಂಜೆ (ರಂಗಿತರಂಗ)
* ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ(ವಜ್ರಕಾಯ)
* ಅತ್ಯುತ್ತಮ ಹಿನ್ನೆಲೆ ಗಾಯಕಿ: ಇಂಚರಾ ರಾವ್(ಕರೆಯೋಲೆ-ರಂಗಿತರಂಗ)
* ಅತ್ಯುತ್ತಮ ಹಿನ್ನೆಲೆ ಗಾಯಕ: ಸಂತೋಷ್ ವೆಂಕಿ(ರಾಜಾರಾಣಿಯಂತೆ-ರಾಟೆ)
* ಅತ್ಯುತ್ತಮ ಹಾಸ್ಯನಟ: ಚಿಕ್ಕಣ್ಣ(ಮಾಸ್ಟರ್ ಪೀಸ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


