ಸೃಜನ್ ಹುಟ್ಟುಹಬ್ಬದ ದಿನ 'ಗೋಲ್ ಮಾಲ್'
ಕಿರುತರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ- ನಟ ಸೃಜನ್ ಲೋಕೇಶ್ ಅವರ ಈ ವರ್ಷದ ಹುಟ್ಟುಹಬ್ಬ ವಿಶೇಷವಂತೆ! ಇಂದು ಅವರ ನೂತನ ಸಿನೆಮಾಗೆ ಚಾಲನೆ ನೀಡಲಾಗುತ್ತಿದೆ.

Published On :
ಬೆಂಗಳೂರು: ಕಿರುತರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ- ನಟ ಸೃಜನ್ ಲೋಕೇಶ್ ಅವರ ಈ ವರ್ಷದ ಹುಟ್ಟುಹಬ್ಬ ವಿಶೇಷವಂತೆ! ಇಂದು ಅವರ ನೂತನ ಸಿನೆಮಾಗೆ ಚಾಲನೆ ನೀಡಲಾಗುತ್ತಿದೆ. ಸಿನೆಮಾದ ಹೆಸರು 'ಗೋಲ್ ಮಾಲ್ ಬ್ರದರ್ಸ್'
"ತಮಾಷೆ ಪ್ರಾರಂಭವಾಗಲಿದೆ ಮತ್ತು ನಾನು ಮತ್ತೊಂದು ಹಾಸ್ಯ ಸಿನೆಮಾ ಮಾಡಲು ಸಜ್ಜಾಗಿದ್ದೇನೆ" ಎನ್ನುತ್ತಾರೆ ಮಜಾ ಟಾಕೀಸ್ ಖ್ಯಾತಿಯ ಸೃಜನ್. ಸೃಜನ್ ಜೊತೆಗೆ ಚಿಕ್ಕಣ್ಣ ಮತ್ತು ರೂಪ್ ಶೆಟ್ಟಿ ನಟಿಸುತ್ತಿದ್ದಾರೆ. ತೆರೆ ಮೇಲೆ ಸೃಜನ್ ಜೋಡಿಯಾಗಿ ನಿಕಿತಾ ನಾರಾಯಣ್ ಕಾಣಿಸಿಕೊಳ್ಳಲಿದ್ದಾರೆ.
ಇದು ರಿಮೇಕ್ ಸಿನೆಮಾ ಅಲ್ಲ ಎಂದು ಸ್ಪಷ್ಟಪಡಿಸುವ ಸೃಜನ್ "ನಾವು ಗೋಲ್ ಮಾಲ್ ಹೆಸರು ತೆಗೆದುಕೊಂಡದ್ದೇಕೆ ಎಂದರೆ ಇದು ಜಾಗತಿಕ ಪದ. ಮತ್ತು ಕಥೆಗೆ ಈ ಶೀರ್ಷಿಕೆ ಹೊಂದಿಕೊಳ್ಳುತ್ತದೆ" ಎನ್ನುತ್ತಾರೆ.
ಸೃಜನ್ ಅವರ ಆಪ್ತ ಗೆಳೆಯ ದರ್ಶನ್ ಸಿನೆಮಾ ಮುಹೂರ್ತಕ್ಕೆ ಅತಿಥಿಯಾಗಲಿದ್ದಾರಂತೆ. ಎಂ ಎಸ್ ಶ್ರೀನಾಥ್ ನಿರ್ದೇಶನದ ಈ ಸಿನೆಮಾಗೆ ಅವರೇ ಮೊದಲು ಕ್ಲ್ಯಾಪ್ ಮಾಡಲಿದ್ದಾರಂತೆ. ಶ್ರೀನಾಥ್ ಅವರೇ ಕಥೆ ಮತ್ತು ಸ್ಕ್ರೀನ್ ಪ್ಲೇ ಬರೆದಿದ್ದು, ವೀನಸ್ ಮೂರ್ತಿ ಸಿನೆಮ್ಯಾಟೋಗ್ರಾಪಹ್ರ್ ಹಾಗೂ ಸತೀಶ್ ಆರ್ಯನ್ ಸಂಗೀತ ನಿರ್ದೇಶಕ.
ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು 45 ದಿನಗಳ ವರೆಗೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
DarshanSrujan Lokeshಸೃಜನ್ ಲೋಕೇಶ್ನಿಕಿತಾ ನಾರಾಯಣ್Golmaal BrothersNikita Narayanಗೋಲ್ ಮಾಲ್ ಬ್ರದರ್ಸ್ಎಂ ಎಸ್ ಶ್ರೀನಾಥ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


