'ಸೈರಾಟ್' ರಿಮೇಕ್ ನಿರ್ದೇಶನಕ್ಕೆ ಎಸ್ ನಾರಾಯಣ್; ಧೃಢೀಕರಿಸಿದ ರಾಕ್ಲೈನ್ ವೆಂಕಟೇಶ್
ಬ್ಲಾಕ್ ಬಸ್ಟರ್ ಮರಾಠಿ ಸಿನೆಮಾ 'ಸೈರಾಟ್' ನ ದಕ್ಷಿಣ ಭಾರತದ ಭಾಷೆಗಳ ರಿಮೇಕ್ ಹಕ್ಕುಗಳನ್ನು ಖರೀದಿಸಿರುವ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಕನ್ನಡ ಅವತರಿಣಿಕೆಯ ನಿರ್ದೇಶನಕ್ಕೆ

ಬೆಂಗಳೂರು: ಬ್ಲಾಕ್ ಬಸ್ಟರ್ ಮರಾಠಿ ಸಿನೆಮಾ 'ಸೈರಾಟ್' ನ ದಕ್ಷಿಣ ಭಾರತದ ಭಾಷೆಗಳ ರಿಮೇಕ್ ಹಕ್ಕುಗಳನ್ನು ಖರೀದಿಸಿರುವ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಕನ್ನಡ ಅವತರಿಣಿಕೆಯ ನಿರ್ದೇಶನಕ್ಕೆ ಎಸ್ ನಾರಾಯಣ್ ಅವರನ್ನು ಆಯ್ಕೆ ಮಾಡಿದ್ದಾರೆ.
ಹಿರಿಯ ನಿರ್ದೇಶಕನ ಆಯ್ಕೆಗೆ ಕಾರಣ ತಿಳಿಸುವ ನಿರ್ಮಾಪಕ "ಮೊದಲಿಗೆ ಇಂತಹ ವಿಷಯಗಳನ್ನು ನಿಭಾಯಿಸುವುದಕ್ಕೆ ಅವರು ಸಮರ್ಥ ವ್ಯಕ್ತಿ. ಈ ಸಿನೆಮಾದ ಬಹುತೇಕ ತಾರಾಗಣ ಹೊಸಬರಾಗಿದ್ದು, ಅವರು ಹೊಸ ನಟರಿಂದ ಒಳ್ಳೆಯ ನಟನೆಯನ್ನು ಸಮರ್ಥವಾಗಿ ಹೊರತೆಗೆಯಬಲ್ಲರು. ಶಿಸ್ತಿಗೆ ಹೆಸರಾಗಿರುವ ಅವರು, ಚಿತ್ರರಂಗದಲ್ಲಿ ಯಶಸ್ಸು ಕಾಣಬಯಸುವ ಹೊಸಬರಿಗೆ ಸೆಟ್ ನಲ್ಲಿಯೇ ಸಿನೆಮಾ ಶಾಲೆಯನ್ನೇ ನಿರ್ಮಿಸಿಬಿಡುತ್ತಾರೆ. ಅಲ್ಲದೆ ಹೊಸಬರನ್ನು ಬಹಳ ತಾಳ್ಮೆಯಿಂದ ಕಾಣುತ್ತಾರೆ" ಎನ್ನುತ್ತಾರೆ ರಾಕ್ಲೈನ್.
ಇನ್ನು ಹೆಸರಿಡದ ಈ ರಿಮೇಕ್ ಚಿತ್ರದ ತಾರಾಗಣದ ಆಯ್ಕೆಗೆ ರಾಕಲೈನ್ ವೆಂಕಟೇಶ್ ಸದ್ಯಕ್ಕೆ ಆಡಿಶನ್ ನಡೆಸುತ್ತಿದ್ದಾರೆ.
ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೈರಾಟ್ ಮರಾಠಿ ಸಿನೆಮಾ 100 ಕೋಟಿಗೂ ಹೆಚ್ಚು ಗಳಿಸಿ ಮರಾಠಿ ಚಿತ್ರರಂಗದಲ್ಲಿ ದಾಖಲೆ ಮಾಡಿತ್ತು. ರಾಕಲೈನ್ ಅವರೇ ನಿರ್ಮಿಸಲಿರುವ ತೆಲುಗು ರಿಮೇಕ್ ಚಿತ್ರವನ್ನು ಮೂಲ ನಿರ್ದೇಶಕ ನಾಗರಾಜ್ ಮಂಜುಳೆ ಅವರೇ ನಿರ್ದೇಶಿಸಲಿದ್ದಾರೆ ಎಂಬ ಊಹಾಪೋಹಗಳು ಕೂಡ ಎದ್ದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


