'ಜಿಗರ್ ಥಂಡಾ' ಯಶಸ್ಸಿನ ನಿರೀಕ್ಷೆಯಲ್ಲಿ ನಟ ರಾಹುಲ್
ಜಿಗರ್ ಥಂಡಾ' ಸಿನೆಮಾದಲ್ಲಿ ನಟ ರಾಹುಲ್ ಕೇವಲ ನಟನಯನ್ನಷ್ಟೇ ಮಾಡದೆ, ಎಲ್ಲ ವಿಭಾಗದಲ್ಲೂ ತನು ಮನವನ್ನು ಅರ್ಪಿಸಿಕೊಂಡಿದ್ದಾರಂತೆ.

ಬೆಂಗಳೂರು: 'ಜಿಗರ್ ಥಂಡಾ' ಸಿನೆಮಾದಲ್ಲಿ ನಟ ರಾಹುಲ್ ಕೇವಲ ನಟನಯನ್ನಷ್ಟೇ ಮಾಡದೆ, ಎಲ್ಲ ವಿಭಾಗದಲ್ಲೂ ತನು ಮನವನ್ನು ಅರ್ಪಿಸಿಕೊಂಡಿದ್ದಾರಂತೆ.
ಕ್ಯಾಮರಾ ಎದುರು ನಿಂತು ನಟಿಸಿರುವುದಷ್ಟೇ ಅಲ್ಲ, ಚಿತ್ರೀಕರಣದ ವೇಳೆಯಲ್ಲಿ ಇತರ ನಟರೊಂದಿಗೆ ಹೊಂದಾಣಿಕೆ, ಪೋಸ್ಟರ್ ಹಚ್ಚುವುದು, ಡಿಟಿಎಸ್, ರಿರೆಕಾರ್ಡಿಂಗ್ ಎಲ್ಲ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದರಂತೆ.
"ನಿರ್ಮಾಪಕರು ನನ್ನ ಮೇಲೇ ಇಟ್ಟ ನಂಬಿಕೆಯಿಂದ ಹೆಚ್ಚುವರಿ ಜವಾಬ್ದಾರಿಗಳನ್ನು ಹೊತ್ತೆ. ಎಂಟು ವರ್ಷ ಕಷ್ಟ ಪಟ್ಟ ನಂತರ ಈ ಯೋಜನೆ ಪಡೆದಿದ್ದೇನೆ. ಪ್ರಿಯಾ ಮತ್ತು ಸುದೀಪ್ ಅವರ ಬೆಂಬಲಕ್ಕೆ ಅನಂತ ಧನ್ಯವಾದಗಳು. ಅವರ ನಂಬಿಕೆ ಉಳಿಸಿಕೊಳ್ಳುತ್ತೇನೆ" ಎನ್ನುತ್ತಾರೆ ರಾಹುಲ್.
"ಯಶಸ್ಸು ಅಥವಾ ವಿಫಲ ನಮ್ಮ ಕೈನಲ್ಲಿ ಇಲ್ಲವಾದರೂ ನಮ್ಮ ಕೆಲಸವನ್ನು ಶಕ್ತಿಮೀರಿ ಮಾಡುತ್ತಿದ್ದೇವೆ. ಚಿತ್ರ 100 ದಿನ ಓಡುತ್ತದೋ ಇಲ್ಲವೋ ಆದರೆ ನಿರ್ಮಾಪಕರು ನನ್ನ ಮೇಲೆ ಹೂಡಿರುವ ಹಣವನ್ನಂತೂ ವಾಪಸ್ ಪಡೆಯುತ್ತಾರೆ ಎಂಬ ಭರವಸೆ ನನಗಿದೆ" ಎನ್ನುತ್ತಾರೆ.
ಇಡೀ ಚಿತ್ರತಂಡ ಬೆಂಬಲಕ್ಕೆ ನಿಂತಿತ್ತು ಎನ್ನುವ ರಾಹುಲ್ "ಚಿತ್ರ ಸಹ ತಾರಾನಟರಾದ ರವಿಶಂಕರ್, ಚಿಕ್ಕಣ್ಣ ಮತ್ತು ಸಾಧುಕೋಕಿಲ ಎಲ್ಲರೂ ಸಹಾಯ ಮಾಡಿದರು. ಹಲವಾರು ಹಿರಿಯ ನಟರು ನನ್ನ ಜೊತೆ ವೈಯಕ್ತಿಕವಾಗಿ ಮಾತನಾಡಿ ಶುಭ ಕೋರಿದ್ದಾರೆ" ಎಂದು ಕೂಡ ರಾಹುಲ್ ತಿಳಿಸುತ್ತಾರೆ.
ಶಿವಗಣೇಶ್ ಈ ಸಿನೆಮಾ ನಿರ್ದೇಶಿಸದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


