ಜುಲೈ 15ರಂದು ತೆರೆಗೆ ಅಪ್ಪಳಿಸಲಿರುವ "ಕಬಾಲಿ"
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಬಾಲಿ ಇದೇ ಜುಲೈ 15ರಂದು ತೆರೆ ಕಾಣಲಿದೆ ಎಂದು ತಿಳಿದುಬಂದಿದೆ.

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಬಾಲಿ ಇದೇ ಜುಲೈ 15ರಂದು ತೆರೆ ಕಾಣಲಿದೆ ಎಂದು ತಿಳಿದುಬಂದಿದೆ.
ಚಿತ್ರತಂಡದ ಅಧಿಕೃತ ಮೂಲಗಳು ತಿಳಿರುವಂತೆ ಮುಂಬರುವ ಜುಲೈ 15ರಂದು ಕಬಾಲಿ ಚಿತ್ರ ತೆರೆ ಕಾಣಲಿದ್ದು, ಚಿತ್ರವನ್ನು ಪಿಎ ರಂಜಿತ್ ನಿರ್ದೇಶಿಸಿದ್ದಾರೆ. ಕಲೈ ಪುಲಿ ಎಸ್ ತನು ಎಂಬುವವರು ಚಿತ್ರವನ್ನು ನಿರ್ಮಿಸಿದ್ದು, ಈಗಾಗಲೇ ಟೀಸರ್ ಮತ್ತು ಹಾಡಿನ ತುಣುಕಗಳಿಂದಾಗಿ ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿರುವ ಕಬಾಲಿ ಚಿತ್ರದಲ್ಲಿ ಬಾಲಿವುಡ್ ನಟಿ ರಾಧಿಕಾ ಆಪ್ಟೆ, ಧನ್ಸಿಕಾ, ದಿನೇಶ್ ರವಿ, ಕಲೈಯಾರಸನ್ ಮತ್ತು ಜಾನ್ ವಿಜಯ್ ಅಭಿನಯಿಸಿದ್ದಾರೆ.
ಪ್ರಮುಖ ಪಾತ್ರದಲ್ಲಿ ತೈವಾನ್ ಮೂಲದ ಖ್ಯಾತ ನಟ ವಿನ್ಸ್ ಟನ್ ಚಾವೋ ಅವರು ಅಭಿನಯಿಸಿದ್ದು, ಚಿತ್ರದ ಆಕರ್ಷಣೆಗಳಲ್ಲಿ ಒಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


