ಅಂತರ್ಜಾಲದಲ್ಲಿ ಕಿಚ್ಚು ಹಚ್ಚಿಸಿರುವ 'ಕಬಾಲಿ' ಸಿನೆಮಾದ 'ನೆರುಪ್ಪ ಡಾ' ಹಾಡಿನ ಟೀಸರ್
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಸುಳ್ಳು ವದಂತಿಗಳ ನಡುವೆ ಅವರ ಮುಂದಿನ ಚಿತ್ರ 'ಕಬಾಲಿ' ಸಿನೆಮಾದ 'ನೆರುಪ್ಪ ಡಾ' ಹಾಡಿನ ಟೀಸರ್

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಸುಳ್ಳು ವದಂತಿಗಳ ನಡುವೆ ಅವರ ಮುಂದಿನ ಚಿತ್ರ 'ಕಬಾಲಿ' ಸಿನೆಮಾದ 'ನೆರುಪ್ಪ ಡಾ' ಹಾಡಿನ ಟೀಸರ್ ಅನ್ನು ಬಿಡುಗಡೆ ಮಾಡಿದ್ದು ಅಂತರಜಾಲದಲ್ಲಿ ವೈರಲ್ ಆಗಿ ಬಹುಚರ್ಚಿತ ವಿಷಯವಾಗಿದೆ.
ರಜನಿಕಾಂತ್ ಅವರ ಸ್ಟೈಲಿಶ್ ಅವತಾರವನ್ನು ತೋರಿಸಿ ಅಭಿಮಾನಿಗಳಿಗೆ ಕಿಚ್ಚು ಹತ್ತಿಸಿರುವ ಈ ಟ್ರೇಲರ್ ಬಿಡುಗಡೆಯಾದ ಮೂರು ಘಂಟೆಗಳಲ್ಲಿ ೧೦ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
ಈ ಟ್ರೇಲರ್ ನಲ್ಲಿ ಸಿನೆಮಾದ ಮುಖ್ಯ ವಿಲನ್ ತೈವಾನ್ ನಟ ವಿನ್ಸ್ಟನ್ ಚಾವೋ ಅವರನ್ನು ಪರಿಚಯಿಸುತ್ತದೆ.
ಪ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ದಾನಿಷ್ಕಾ, ರಿತ್ವಿಕಾ, ಕಿಶೋರ್, ದಿನೇಶ್, ರಾಧಿಕಾ ಆಪ್ಟೆ ಕೂಡ ನಟಿಸಿದ್ದು, ಸಿನೆಮಾ ಜಾಗತಿಕವಾಗಿ ಜುಲೈ ೧೫ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


