ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್: ರಿಯಾಲಿಟಿ ಶೋ ಜಡ್ಜ್ ಸ್ಥಾನದಿಂದ ನಟಿ ಭಾವನಾ ಔಟ್
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ತೀರ್ಪುಗಾರರ ಸ್ಥಾನದಿಂದ ಕೈ ಬಿಟ್ಟಿರುವುದಕ್ಕೆ ನಟಿ ಹಾಗೂ ಬಾಲಭವನ ಅಧ್ಯಕ್ಷೆ ಭಾವನಾ ರಾಮಣ್ಣ ಬೇಸರ ಹಾಗೂ ...

ಬೆಂಗಳೂರು: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ತೀರ್ಪುಗಾರರ ಸ್ಥಾನದಿಂದ ಕೈ ಬಿಟ್ಟಿರುವುದಕ್ಕೆ ನಟಿ ಹಾಗೂ ಬಾಲಭವನ ಅಧ್ಯಕ್ಷೆ ಭಾವನಾ ರಾಮಣ್ಣ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಝಿ ವಾಹಿನಿಯ ನಾನ್‌ಫಿಕ್ಷನ್ ವಿಭಾಗದ ರಾಘವೇಂದ್ರ ಹುಣಸೂರು ಅವರು ನನ್ನನ್ನು ತೀರ್ಪುಗಾರರಾಗಿ ಬರುವಂತೆ ಒತ್ತಾಯಿಸಿದ್ದರು. ನಾನು ಕೆಲವು ಷರತ್ತುಗಳನ್ನು ವಿಧಿಸಿ ಒಪ್ಪಿಕೊಂಡಿದ್ದೆ. ಆದರೆ ಅವರು ಹೇಳಿದಂತೆ ನಡೆದುಕೊಂಡಿಲ್ಲ ಎಂದು ದೂರಿದ್ದಾರೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮಕ್ಕಳ ಕಾರ್ಯ ಕ್ರಮ ಆಗಿರಬಾರದು. ಕಾರ್ಯಕ್ರಮಕ್ಕೂ ಮೊದಲೇ ಸ್ಕ್ರಿಪ್ಟ್ ನೀಡಬೇಕು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದ್ದೆ. ಆದರೆ, ಅದೆಲ್ಲವೂ ಉಲ್ಲಂಘನೆಯಾಗಿದೆ. ಮೊದಲ ಕಂತಿನಲ್ಲೇ ಬಹಳಷ್ಟು ಮಕ್ಕಳು ಭಾಗವಹಿಸಿದ್ದರು ಎಂದು ಹೇಳಿದರು.
ತೀರ್ಪುಗಾರರನ್ನು ಸೆಟ್‌ಗೆ ಮೊದಲೇ ಬರಲು ಹೇಳಿ ಗಂಟೆಗಟ್ಟಲೆ ಕಾಯಿಸಿದ್ದಾರೆ. ಅಲ್ಲದೆ, ಬೆಳಗಿನ ಜಾವದವರೆಗೂ ಶೂಟಿಂಗ್ ಮಾಡುತ್ತಾರೆ. ಜತೆಗೆ ಅಪಾಯಕಾರಿ ಸ್ಟಂಟ್‌ಗಳಿಗೆ ತರಬೇತುದಾರರಿಗೆ ಕುಮ್ಮಕ್ಕು ನೀಡುತ್ತಾರೆ ಎಂದು ಆರೋಪಿಸಿದ್ದಾರೆ.
ನನಗೆ ಝಿ ವಾಹಿನಿಯ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯವಿದೆ. ಆದರೆ, ಈ ಕಾರ್ಯಕ್ರಮದ ಬಗ್ಗೆ ಮಾತ್ರ ನನ್ನ ಅಸಮಾಧಾನವಿದೆ ಎಂದು ಸ್ಪಷ್ಟಪಡಿಸಿದರು. ಕ್ಷುಲ್ಲಕ ಕಾರಣದಿಂದ ನನ್ನನ್ನು ಕಾರ್ಯಕ್ರಮದಿಂದ ಕೈ ಬಿಡಲಾಗಿದೆ. ಇದುವರೆಗೂ ಸಂಭಾವನೆಯನ್ನೂ ನೀಡಿಲ್ಲ. ಕಾರ್ಯಕ್ರಮಕ್ಕೂ ಮೊದಲು ಮಾಡಿಕೊಂಡಿದ್ದ ಒಪ್ಪಂದದ ಪ್ರತಿ ಕೂಡ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ ನನ್ನ ಸಮಯ ವ್ಯರ್ಥವಾಗಿದ್ದು, ನನ್ನ ಕಾರ್ಯಕ್ರಮಗಳು ಹಾಳಾಗಿವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


