ಭಿಕ್ಷುಕನಂತೆ ಮಾರುವೇಷ ಧರಿಸಿ 128 ರು. ಸಂಗ್ರಹಿಸಿದ ನಟ ಶರಣ್
ನಟರಾಜ ಸರ್ವಿಸ್ ಚಿತ್ರಕ್ಕಾಗಿ ನಟ ಶರಣ್ ವೇಷ ಮರೆಸಿಕೊಂಡು ಬೆಂಗಳೂರಿನ ಗಾಂಧಿ ಬಜಾರಲ್ಲಿ ಕೂತು ಚಿತ್ರದ ಪ್ರಮುಖ ಗೀತೆಯನ್ನು ಹಾಡಿದ್ದಾರೆ. ..

ಬೆಂಗಳೂರು: ನಟರಾಜ ಸರ್ವಿಸ್ ಚಿತ್ರಕ್ಕಾಗಿ ನಟ ಶರಣ್ ವೇಷ ಮರೆಸಿಕೊಂಡು ಬೆಂಗಳೂರಿನ ಗಾಂಧಿ ಬಜಾರಲ್ಲಿ ಕೂತು ಚಿತ್ರದ ಪ್ರಮುಖ ಗೀತೆಯನ್ನು ಹಾಡಿದ್ದಾರೆ.
ಚಿತ್ರದ ಪ್ರಮೋಷನಲ್ ಗೀತೆಗಾಗಿ ನಟ ಶರಣ್ ಭಿಕ್ಷುಕನಂತೆ ವೇಷ ಧರಿಸಿ, ಗಾಂಧಿ ಬಜಾರ್, ಹನುಮಂತನಗರ ಸುತ್ತಮುತ್ತಹಾಡು ಹೇಳಿಕೊಂಡು ಅಲೆದಾಡಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಇನ್ನು ಗಾಂಧಿ ಬಜಾರ್‌ನಲ್ಲಿ ಈ ಗೆಟಪ್‌ನಲ್ಲಿರುವುದು ಶರಣ್ ಎಂದು ಸಾಮಾನ್ಯ ಜನರಿಗೆ ಗೊತ್ತಾಗಿಲ್ಲ. ಆತ ಭಿಕ್ಷುಕ ಎಂದು ತಿಳಿದು ಹಲವರು ಹಣ ಕೂಡ ಹಾಕಿದ್ದಾರೆ. ಇದನ್ನು ಶರಣ್ ಸಖತ್ ಎಂಜಾಯ್ ಕೂಡ ಮಾಡಿದರಂತೆ.
ಈ ಹೊಸ ಪ್ರಯತ್ನವನ್ನು ಶರಣ್ ಸಾಂಡಲ್‌ವುಡ್‌ನಲ್ಲಿ ಹುಟ್ಟುಹಾಕಿದ್ದಾರೆ. ಯಾರಿಗೂ ಭಿಕ್ಷುಕನ ವೇಶದಲ್ಲಿರುವುದು ಶರಣ್ ಎಂದು ಗೊತ್ತಾಗಲಿಲ್ಲ. ಒಂದಿಡಿ ದಿನ ನಡೆದ ಶೂಟಿಂಗ್ ನಲ್ಲಿ ಒಬ್ಬ ವ್ಯಕ್ತಿ ಶರಣ್ ಅವರನ್ನು ಗುರುತಿಸಿಬಿಟ್ರು. ನಂತರ ನಾವು ಅಲ್ಲಿಂದ ತೆರಳಿದೆವು ಎಂದು ನಿರ್ದೇಶಕ ಪವನ್ ಒಡೆಯರ್ ತಮ್ಮ ಅನುಭವ ಹೇಳುತ್ತಾರೆ.
ಎನ್ ಎಸ್ ರಾಜ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಶರಣ್‌ಗೆ ಮಯೂರಿ ನಾಯಕಿಯಾಗಿದ್ದು, ವಿಭಿನ್ನ ಕಥಾ ಹಂದರವನ್ನು ಚಿತ್ರ ಹೊಂದಿದೆ. ಹೀಗಾಗಿ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


