ಸಿನಿಮಾ ಸುದ್ದಿ

ರಿಲೀಸ್ ಗೂ ಮುನ್ನ ಬರೋಬ್ಬರಿ 200 ಕೋಟಿ ಕಬಳಿಸಿದ ಕಬಾಲಿ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾ ಬಿಡುಗಡೆಗೂ ಮುನ್ನ 200 ಕೋಟಿ ರು ಕಬಳಿಸಿದೆ. ರಜನಿಕಾಂತ್ ಸಿನಿಮಾಗಳೆಂದರೆ, ಅಭಿಮಾನಿಗಳಿಗೆ ..

ರಿಲೀಸ್ ಗೂ ಮುನ್ನ ಬರೋಬ್ಬರಿ 200 ಕೋಟಿ ಕಬಳಿಸಿದ ಕಬಾಲಿ
ಕಬಾಲಿ ಟೀಸರ್ ದೃಶ್ಯ
Published On :

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾ ಬಿಡುಗಡೆಗೂ ಮುನ್ನ 200 ಕೋಟಿ ರು ಕಬಳಿಸಿದೆ. ರಜನಿಕಾಂತ್ ಸಿನಿಮಾಗಳೆಂದರೆ, ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅವರ ಸಿನಿಮಾಗಳಿಗೆ ಯಾವಾಗಲು ಡಿಮ್ಯಾಂಡ್ ಜಾಸ್ತಿ.

ಜುಲೈ 1 ರಂದು ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ 'ಕಬಾಲಿ' ರಿಲೀಸ್ ಆಗಲಿದೆ. ಈ ಚಿತ್ರ ಬಿಡುಗಡೆಗೂ ಮೊದಲೇ ದಾಖಲೆಯ ಗಳಿಕೆ ಮಾಡಿದೆ. ಈ ಮೊದಲು 'ಕಬಾಲಿ' ಟೀಸರ್ ರಿಲೀಸ್ ಆಗಿ 2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು, ದಾಖಲೆಯಾಗಿತ್ತು. ಈಗ ಸಿನಿಮಾದ ಸ್ಯಾಟ್ ಲೈಟ್ ಹಕ್ಕು, ಡಿಸ್ಟ್ರಿಬ್ಯೂಷನ್ ರೈಟ್ಸ್ ನಿಂದ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿದೆ.

ಈಗಾಗಲೇ 'ಕಬಾಲಿ' ಹವಾ ಶುರುವಾಗಿದ್ದು, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 5000 ಸ್ಕ್ರೀನ್ ಗಳಲ್ಲಿ ಜುಲೈ 1 ರಂದು 'ಕಬಾಲಿ' ಅಬ್ಬರ ಆರಂಭವಾಗಲಿದೆ. ಜೂನ್ 11 ರಂದು ಕಬಾಲಿ ಸಿನಿಮಾ ಆಡಿಯೋ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.