'ಮೆಶಿನ್' ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಲಿರುವ ಇಮ್ರಾನ್ ಸರ್ದಾರಿಯಾ
ನೃತ್ಯ ನಿರ್ದೇಶಕ-ಚಲನಚಿತ್ರ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈಗ ಬಾಲಿವುಡ್ ಗೂ ಹೆಜ್ಜೆ ಇಡಲಿದ್ದಾರೆ. ಅಬ್ಬಾಸ್-ಮುಸ್ತಾನ್ ನಿರ್ದೇಶನದ ರೊಮ್ಯಾಂಟಿಕ್ ಥ್ರಿಲ್ಲರ್ 'ಮೆಶಿನ್'ಗೆ ನೃತ್ಯ ನಿರ್ದೇಶನ ಮಾಡುವ

ಬೆಂಗಳೂರು: ನೃತ್ಯ ನಿರ್ದೇಶಕ-ಚಲನಚಿತ್ರ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈಗ ಬಾಲಿವುಡ್ ಗೂ ಹೆಜ್ಜೆ ಇಡಲಿದ್ದಾರೆ. ಅಬ್ಬಾಸ್-ಮುಸ್ತಾನ್ ನಿರ್ದೇಶನದ ರೊಮ್ಯಾಂಟಿಕ್ ಥ್ರಿಲ್ಲರ್ 'ಮೆಶಿನ್'ಗೆ ನೃತ್ಯ ನಿರ್ದೇಶನ ಮಾಡುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಇಲ್ಲಿನವರೇ ಆದ ರವಿವರ್ಮಾ ಆ ಸಿನೆಮಾಗೆ ಸ್ಟಂಟ್ ಮಾಸ್ಟರ್.
ತಮ್ಮ ಚೊಚ್ಚಲ ನಿರ್ದೇಶನದ 'ಎಂದೆಂದಿಗೂ' ಸಿನೆಮಾದಲ್ಲಿನ ಹಾಡುಗಳು ಗಮನ ಸೆಳೆದು ಈ ಸಿನೆಮಾಗೆ ಆಯ್ಕೆಯಾಗಿರುವುದಾಗಿ ತಿಳಿಸುವ ಇಮ್ರಾನ್ "ಅವರು 'ಮೈನಾ'ದ ಶೀರ್ಷಿಕೆ ಹಾಡು, 'ಜಾಕಿ'ಯಲ್ಲಿ ನಾನು ಒದಗಿಸಿದ ಪರಿಚಯ ಹಾಡು, 'ಮಾಣಿಕ್ಯದ 'ಜಿನ ಜಿನ' ಮತ್ತು 'ಮಾಸ್ಟರ್ ಪೀಸ್'ನ ಎರಡು ಹಾಡುಗಳು ಅವರಿಗೆ ಇಷ್ಟವಾದವು" ಎನ್ನುತ್ತಾರೆ.
ಬಾಲಿವುಡ್ ನಲ್ಲಿ ಸದಾ ಬದಲಾವಣೆಯನ್ನು ಎದುರು ನೋಡುವ ಈ ಜೋಡಿಯ ಅವಶ್ಯಕತೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ ಎನ್ನುವ ಅವರು "ಹಾಡುಗಳಿಗೆ ನೃತನಿರ್ದೇಶಿಸಲು ೪೫ ದಿನ ತೆಗೆದುಕೊಂಡೆ, ಮೊದಲ ಎರಡು ಹಾಡುಗಳು ಬಥೂಮಿ ಮತ್ತು ಜಾರ್ಜಿಯಾದಲ್ಲಿ ಚಿತ್ರೀಕರಣಗೊಂಡಿವೆ. ಈ ತಿಂಗಳ ಕೊನೆಯಲ್ಲಿ ಇನ್ನೆರಡು ರೊಮ್ಯಾಂಟಿಕ್ ಹಾಡುಗಳ ಚಿತ್ರೀಕರಣ ನಡೆಯಲಿದೆ" ಎಂದು ಇಮ್ರಾನ್ ಹೇಳುತ್ತಾರೆ.
'ಕಿಲಾಡಿ' ದಿನಗಳಿಂದಲೂ ಈ ನಿರ್ದೇಶಕ ಜೋಡಿಯ ದೊಡ್ಡ ಅಭಿಮಾನಿ ಎಂದು ಹೇಳುವ ಇಮ್ರಾನ್ "ಅವರ ಕೆಲಸದ ಬಗ್ಗೆ ನನಗೆ ಎಂದೂ ಒಲವಿತ್ತು ಈಗ ಅವರೊಂದಿಗೆ ಕೆಲಸ ಮಾಡಲು ಸಿಕ್ಕಿರುವ ಅವಕಾಶ ಕನಸು ನನಸಾದಂತೆ" ಎನ್ನುತ್ತಾರೆ. ಈ ಸಿನೆಮಾದ ಮೂಲಕ ಅಬ್ಬಾಸ್ ಅವರು ತಮ್ಮ ಪುತ್ರ 'ಮುಸ್ತಫಾ' ಅವರನ್ನು ಪರಿಚಯಿಸುತ್ತಿದ್ದು, ಕೈರಾ ಅದ್ವಾನಿ ನಾಯಕ ನಟಿ.
ಬಾಲಿವುಡ್ ಪಾದಾರ್ಪಣೆ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ನಂಬುವ ಅವರು ಸುದೀಪ್ ಅವರ ದ್ವಿಭಾಷಾ ಚಲನಚಿತ್ರ 'ಕೋಟಿಗೊಬ್ಬ-೨' ಸಿನೆಮಾದ ಪರಿಚಯ ಹಾಡಿಗೂ ನೃತ್ಯ ನಿರ್ದೇಶನ ಮಾಡಿರುವುದಕ್ಕೆ ಉತ್ಸುಕರಾಗಿದ್ದಾರೆ. "ಈ ವರ್ಷ ನನಗೆ ಒಳ್ಳೆಯ ಯೋಜನೆಗಳು ಸಿಕ್ಕಿವೆ" ಎನ್ನುತ್ತಾರೆ.
ಜೊತೆಗೆ 'ಉಪ್ಪು ಹುಳಿ ಖಾರ' ಸಿನೆಮಾದ ನಿರ್ದೇಶನದಲ್ಲಿ ಎರಡನೆ ಹಂತದ ಚಿತ್ರೀಕರಣ ನಾಳೆಯಿಂದ ಪ್ರಾರಂಭಿಸಲಿದ್ದಾರಂತೆ. "ಮುಂದಿನ ೧೫ ದಿನಗಳಿಗೆ ನಟಿ ಮಾಲಾಶ್ರೀ ಅವರು ಸೆಟ್ ಸೇರಿಕೊಳ್ಳಲಿದ್ದಾರೆ. ರವಿವರ್ಮಾ ಅವರ ದಿನಾಂಕಗಳಿಗೆ ಕಾಯುತ್ತಿದ್ದೇವೆ" ಎನ್ನುತ್ತಾರೆ ಇಮ್ರಾನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


