ರಾಜಕೀಯ ಒತ್ತಡಕ್ಕೆ ಬಾಗಿದ ಸೆನ್ಸಾರ್ ಮಂಡಳಿ; 'ಉಡ್ತಾ ಪಂಜಾಬ್' ನಿಂದ ಪಂಜಾಬ್ ಹೊರಕ್ಕೆ!
'ಉಡ್ತಾ ಪಂಜಾಬ್' ನಿಂದ ಪಂಜಾಬ್ ಹೊರಬಿದ್ದರೆ ಹೇಗೆ? ರಾಜಕೀಯ ಒತ್ತಡಕ್ಕೆ ಮಣಿದಿರುವ ಸೆನ್ಸಾರ್ ಮಂಡಳಿ, ಶಾಹಿದ್ ಕಪೂರ್ ನಟನೆಯ ಈ ಸಿನೆಮಾದ ಕಥೆ ಪಂಜಾಬ್ ನಲ್ಲಿ ನಡೆಯುವುದು

ನವದೆಹಲಿ: 'ಉಡ್ತಾ ಪಂಜಾಬ್' ನಿಂದ ಪಂಜಾಬ್ ಹೊರಬಿದ್ದರೆ ಹೇಗೆ? ರಾಜಕೀಯ ಒತ್ತಡಕ್ಕೆ ಮಣಿದಿರುವ ಸೆನ್ಸಾರ್ ಮಂಡಳಿ, ಶಾಹಿದ್ ಕಪೂರ್ ನಟನೆಯ ಈ ಸಿನೆಮಾದ ಕಥೆ ಪಂಜಾಬ್ ನಲ್ಲಿ ನಡೆಯುವುದು ಬೇಡ ಎಂಬ ಅಭಿಪ್ರಾಯ ತಳೆದಿದೆ ಎನುತ್ತವೆ ಮೂಲಗಳು.
ಅಭಿಷೇಕ್ ಚೌಬೆ ನಿರ್ದೇಶನದ ಈ ಸಿನೆಮಾಗೆ ಪ್ರಮಾಣ ಪತ್ರ ನೀಡಲು ಈ ಹಿಂದೆ ಸೆನ್ಸಾರ್ ಮಂಡಳಿ ನಿರಾಕರಿಸಿದ್ದರಿಂದ ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಈಗ ಇನ್ನೂ ಕಠಿಣ ಸಲಹೆಗಳನ್ನು ನೀಡಿರುವ ಈ ಸಮಿತಿ, ಪ್ರಮಾಣ ಪತ್ರ ಬೇಕಾದರೆ, ಸಿನೆಮಾ ಕಥೆ ಪಂಜಾಬ್ ನಲ್ಲಿ ನಡೆದಿಲ್ಲ ಎಂಬುವಂತೆ ಬದಲಾವಣೆಗಳನ್ನು ಮಾಡಲು ಸೂಚಿಸದೆ.
ಪರಿಶೀಲನಾ ಸಮಿತಿಯ ಸಲಹೆಗಳು/ತಕರಾರುಗಳು ಈಗ ರಾಜಕೀಯ ಬಣ್ಣ ಪಡೆದಿವೆ. ಪಂಜಾಬ್ ಗಿಂತಲೂ ಯಾವುದಾದರೂ ಕಾಲ್ಪನಿಕ ಪ್ರದೇಶದಲ್ಲಿ ಕಥೆ ನಡೆಯುವಂತೆ ಸೂಚಿಸಲು ಹಲವಾರು ಕಟ್ ಗಳನ್ನು-ಬದಲಾವಣೆಗಳನ್ನು ಸೆನ್ಸಾರ್ ಮಂಡಳಿ ಸೂಚಿಸಿದೆ.
ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯ ಬಗೆಗಿನ ಈ ಚಿತ್ರ ಪಂಜಾಬ್ ಗೆ ಅವಮಾನ ಮಾಡಲಿದೆ ಎಂದು ಪರಿಶೀಲನಾ ಸಮಿತಿ ಅಭಿಪ್ರಾಯ ತಳೆದಿದೆ.
ಇದಕ್ಕೂ ಮುಂಚೆ ಪಂಜಾಬ್ ನ ಆಡಳಿತ ಪಕ್ಷ ಆಕಾಲಿ ದಳ ಈ ಸಿನೆಮಾಗೆ ಆಕ್ಷೇಪ ಎತ್ತಿತ್ತು. ಮುಂದಿನ ವರ್ಷ ಪಂಜಾಬ್ ಚುನಾವಣೆಗಳು ನಡೆಯುವುದರಿಂದ, ಸೆನ್ಸಾರ್ ಮಂಡಲಿ ಮೇಲೆ ರಾಜಕೀಯ ಪಕ್ಷಗಳು ರಾಜಕೀಯ ಪಕ್ಷಗಳು ಪ್ರಭಾವ ಬೀರಿವೆ ಎನ್ನಲಾಗಿದೆ.
ಶಾಹಿದ್ ಕಪೂರ್ ಅವರೊಂದಿಗೆ, ಆಲಿಯಾ ಭಟ್, ಕರೀನಾ ಕಪೂರ್ ಕೂಡ ನಟಿಸಿರುವ ಈ ಸಿನೆಮಾ ಜೂನ್ ೧೭ಕ್ಕೆ ಬಿಡುಗಡೆಯಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


