ಸಿನಿಮಾ ಸುದ್ದಿ

ತಮಿಳು ನಿರ್ದೇಶಕ, ನಟ ಬಾಲು ಆನಂದ್ ನಿಧನ

ತಮಿಳು ಚಿತ್ರನಟ, ನಿರ್ದೇಶಕ ಬಾಲು ಆನಂದ್ (62) ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ..

ತಮಿಳು ನಿರ್ದೇಶಕ, ನಟ ಬಾಲು ಆನಂದ್ ನಿಧನ
ಬಾಲು ಆನಂದ್
Published On :

ಕೊಯಮತ್ತೂರು: ತಮಿಳು ಚಿತ್ರನಟ, ನಿರ್ದೇಶಕ ಬಾಲು ಆನಂದ್ (62) ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದ ಹಾಗೂ ಕೆಲವು ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದ ಆನಂದ್ ಅವರಿಗೆ ಕಲಾಮಪಾಳ್ಯಂನ ತಮ್ಮ ನಿವಾಸದಲ್ಲಿ ಇದ್ದಾಗ ಎದೆ ನೋವು ಕಾಣಿಸಿಕೊಂಡಿತು. ತತ್​ಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ಒಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರು ಎಳೆದರು ಎಂದು ಮೂಲಗಳು ಹೇಳಿವೆ.

ಸತ್ಯರಾಜ್ ಜೊತೆಗೆ ಆನಂದ್ ಅವರು ನಟಿಸಿದ್ದ ‘ಅಣ್ಣಾನಗರ ಪಸ್ಟ್ ಸ್ಟ್ರೀಟ್’ ಹಾಗೂ ವಿಜಯಕಾಂತ್ ಜೊತೆಗೆ ನಟಿಸಿದ್ದ ‘ನಾನೇ ರಾಜ, ನಾನೇ ಮಂತ್ರಿ’ ಚಿತ್ರಗಳು ಅತ್ಯಂತ ಜನಪ್ರಿಯವಾಗಿದ್ದವು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.