ಸಿನಿಮಾ ಸುದ್ದಿ

ಟರ್ಮಿನೇಟರ್ ಖ್ಯಾತಿಯ ನಟ ಅರ್ನಾಲ್ಡ್ ರನ್ನು ಅಟ್ಟಾಡಿಸಿದ ಆನೆ!

ಟರ್ಮಿನೇಟರ್ ಖ್ಯಾತಿಯ ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗರ್ ಅವರನ್ನು ಆಫ್ರಿಕಾದ ಕಾಡಾನೆಯೊಂದು ಅಟ್ಟಾಡಿಸಿದ್ದು, ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ...

ಟರ್ಮಿನೇಟರ್ ಖ್ಯಾತಿಯ ನಟ ಅರ್ನಾಲ್ಡ್ ರನ್ನು ಅಟ್ಟಾಡಿಸಿದ ಆನೆ!
ಅರ್ನಾಲ್ಡ್ ಜೀಪ್ ಅನ್ನು ಅಟ್ಟಾಡಿಸಿದ ಆನೆ (ಟ್ವಿಟರ್ ಚಿತ್ರ)
Published On :

ಜೋಹಾನ್ಸ್ ಬರ್ಗ್: ಟರ್ಮಿನೇಟರ್ ಖ್ಯಾತಿಯ ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗರ್ ಅವರನ್ನು ಆಫ್ರಿಕಾದ ಕಾಡಾನೆಯೊಂದು ಅಟ್ಟಾಡಿಸಿದ್ದು, ಕೂದಲೆಳೆ ಅಂತರದಲ್ಲಿ ಅವರು  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅರ್ನಾಲ್ಡ್ ಸ್ಪೋರ್ಟ್ಸ್ ಫೆಸ್ಟಿವಲ್ ನ ಪ್ರಚಾರಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದ ಅರ್ನಾಲ್ಡ್, ಬಿಡುವಿನ ವೇಳೆಯಲ್ಲಿ ಸಫಾರಿಗೆ ತೆರಳಿದ್ದಾರೆ. ಈ ವೇಳೆ ಅರ್ನಾಲ್ಡ್ ಅವರಿದ್ದ ಕಾರನ್ನು ಆಫ್ರಿಕಾದ  ದೈತ್ಯ ಕಾಡಾನೆಯೊಂದು ಅಟ್ಟಾಡಿಸಿದ್ದು, ಅರ್ನಾಲ್ಡ್ ಮತ್ತು ಅವರ ತಂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ರೋಚಕ ವಿಚಾರವನ್ನು ಸ್ವತಃ ನಟ ಅರ್ನಾಲ್ಡ್  ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟ್ವಿಟ್ಟರ್ ನಲ್ಲಿ ಆನೆ ಅಟ್ಟಾಡಿಸಿದ ರೋಚಕ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

ಆಫ್ರಿಕಾದ ಸಫಾರಿ ವಾಹನದಲ್ಲಿ ಕುಳಿತಿದ್ದ ಅರ್ನಾಲ್ಡ್ ಆನೆಯನ್ನು ಕಂಡ ಕೂಡಲೇ ವಿಡಿಯೋ ಮಾಡಲು ಆರಂಭಿಸಿದ್ದಾರೆ. ಕೆಲಕಾಲ ಸುಮ್ಮನಿದ್ದ ಆನೆ ಬಳಿಕ ಪಕ್ಕಕ್ಕೆ ಸರಿದು  ಹೋಗುತ್ತಿರುವಂತೆಯೇ ಅರ್ನಾಲ್ಡ್ ಇದ್ದ ಜೀಪ್ ಅನ್ನು ಬೆನ್ನಟ್ಟಿದೆ. ಆನೆ ತಮ್ಮ ಜೀಪ್ ಅನ್ನು ಬೆನ್ನಟ್ಟಿದ ವಿಚಾರ ತಿಳಿಯುತ್ತಿದ್ದಂತೆಯೇ ಜೀಪ್ ಚಾಲಕ ವೇಗವಾಗಿ ಗಾಡಿ ಓಡಿಸುವ ಮೂಲಕ  ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

ಬಳಿಕ ಸಫಾರಿ ವೇಳೆ ಆಫ್ರಿಕಾದ ದೈತ್ಯ ಸಿಂಹಗಳನ್ನು ಭೇಟಿಯಾಗಿರುವ ಅರ್ನಾಲ್ಡ್ ಆ ಚಿತ್ರವನ್ನು ಕೂಡ ಶೇರ್ ಮಾಡಿದ್ದಾರೆ. "ತಮ್ಮ ಆಫ್ರಿಕಾ ಸಫಾರಿಯ ರೋಚಕ ಅನುಭವವನ್ನು ಟ್ವಿಟರ್  ನಲ್ಲಿ ಹಂಚಿಕೊಂಡಿರುವ ನಟ ಅರ್ನಾಲ್ಡ್, ಈ ದೈತ್ಯ ಸುಂದರ ಪ್ರಾಣಿಗಳನ್ನು ನೋಡಿ ನಾನು ನಿಜಕ್ಕೂ ವಿಸ್ಮಯಗೊಂಡಿದ್ದೆ. ಇಂತಹ ದೈತ್ಯ ಸುಂದರ ಪ್ರಾಣಿಗಳನ್ನು ದಂತಕ್ಕಾಗಿ ಕೊಲ್ಲಬಾರದು  ಎಂದು ಅರ್ನಾಲ್ಡ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.