ಆನ್‌ಲೈನ್ ನಲ್ಲಿ ಕಬಾಲಿ ಚಿತ್ರದ ರಜನಿ ಎಂಟ್ರಿ ಸೀನ್ ಲೀಕ್
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರದಲ್ಲಿನ ರಜಿನಿ ಎಂಟ್ರಿ ಸೀನ್ ಗಳು ಆನ್ ಲೈನಲ್ಲಿ ಲೀಕ್ ಆಗಿವೆ...

ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರದಲ್ಲಿನ ರಜಿನಿ ಎಂಟ್ರಿ ಸೀನ್ ಗಳು ಆನ್ ಲೈನಲ್ಲಿ ಲೀಕ್ ಆಗಿವೆ.
ಜಗತ್ತಿನಾದ್ಯಂತ ನಾಳೆ ಚಿತ್ರ ತೆರೆಕಾಣುತ್ತಿದ್ದು ಇದಕ್ಕೂ ಮೊದಲೇ ಚಿತ್ರದಲ್ಲಿನ ಕೆಲ ದೃಶ್ಯಗಳು ಆನ್ ಲೈನಲ್ಲಿ ಲೀಕ್ ಆಗಿದ್ದು, ಚಿತ್ರದಲ್ಲಿ ರಜನಿಕಾಂತ್ ಅವರು ಜೈಲ್ ನಿಂದ ಬಿಡುಗಡೆಯಾಗುತ್ತಿರುವ ಸೀನ್ ಇದಾಗಿದೆ.
ಇನ್ನು ಅಕ್ರಮ ಡೌನ್ ಲೋಡ್ ತಡೆಗಟ್ಟುವ ಸಲುವಾಗಿ ಕಬಾಲಿ ಚಿತ್ರ ನಿರ್ಮಾಪಕ ಕಲೈಪುಲಿ ಧನು ಮದ್ರಾಸ್ ಹೈಕೋರ್ಟ್ ಗೆ ದಾವೆ ಸಲ್ಲಿಸಿ 169 ಇಂಟರ್ ನೆಟ್ ಸೇವೆ ಒದಗಿಸುವ ವೆಬ್ ಸೈಟ್ ಗಳ ಮೇಲೆ ಒತ್ತಡವೇರಿದ್ದರು. ಇದೀಗ ಚಿತ್ರ ಕೆಲ ದೃಶ್ಯಗಳು ಹರಿದಾಡುತ್ತಿವೆ.
ಅಮೆರಿಕದಲ್ಲಿ ರಜನಿಕಾಂತ್ ಅವರ ಉಪಸ್ಥಿತಿಯಲ್ಲಿ ನಿನ್ನೆ ಕಬಾಲಿ ಚಿತ್ರದ ವಿಶೇಷ ಪ್ರದರ್ಶನವನ್ನು ನಡೆಸಲಾಗಿತ್ತು. ಇದೀಗ ಚಿತ್ರದ ತುಣುಕುಗಳು ತಮಿಳ್ ರಾಕರ್ಸ್.ಕಾಂ ಎಂಬ ಹೆಸರಿನ ಮೂಲಕ ಆನ್ ಲೈನಲ್ಲಿ ಹರಿಬಿಡಲಾಗಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


