ವರ್ಜಿನಿಯಾ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್
ಅಮೆರಿಕಾದ ವರ್ಜಿನಿಯಾದಲ್ಲಿ 'ಯೋಗವಿಲ್ಲ' ಎಂದೇ ಹೆಸರಾದ ಸಚ್ಚಿದಾನಂದ ಆಶ್ರಮಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪುತ್ರಿ ಐಶ್ವರ್ಯ ಅವರೊಂದಿಗೆ ಭೇಟಿ ನೀಡಿದ್ದಾರೆ.

Published On :
ಚೆನ್ನೈ: ಅಮೆರಿಕಾದ ವರ್ಜಿನಿಯಾದಲ್ಲಿ 'ಯೋಗವಿಲ್ಲ' ಎಂದೇ ಹೆಸರಾದ ಸಚ್ಚಿದಾನಂದ ಆಶ್ರಮಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪುತ್ರಿ ಐಶ್ವರ್ಯ ಅವರೊಂದಿಗೆ ಭೇಟಿ ನೀಡಿದ್ದಾರೆ.
ಈ ವಾರಾಂತ್ಯದಲ್ಲಿ ಅಲ್ಲಿಗೆ ಭೇಟಿ ನೀಡಿದ ನಂತರ ಟ್ವೀಟ್ ಮಾಡಿದ ಐಶ್ವರ್ಯ "ವರ್ಜಿನಿಯಾ 'ಯೋಗವಿಲ್ಲ'ದ ಮೂವತ್ತನೇ ವಾರ್ಷಿಕೋತ್ಸವದಲ್ಲಿ ಗುರು ಸಚ್ಚಿದಾನಂದರ ಚರಣಕಮಲದಲ್ಲಿ ಅಪ್ಪ ಮತ್ತು ನಾನು" ಎಂದು ಐಶ್ವರ್ಯ ಸೋಮವಾರ ಟ್ವೀಟ್ ಮಾಡಿದ್ದಾರೆ.
ಒಂದು ತಿಂಗಳ ಹಿಂದೆಯೇ 65 ವರ್ಷದ ನಟ ಅಮೆರಿಕಾಗೆ ತೆರಳಿದ್ದರು. ಈ ವಾರದ ಕೊನೆಗೆ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ಈ ವಾರ ಅವರು ಹಿಂದಿರುಗಲಿದ್ದಾರೆ. ಅವರಿನ್ನೂ 'ಕಬಾಲಿ' ಸಿನೆಮಾದ ಅಂತಿಮ ಆವೃತ್ತಿ ವೀಕ್ಷಿಸಬೇಕಿದೆ" ಎಂದು ಮೂಲಗಳು ತಿಳಿಸಿವೆ.
ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನೆಮಾ 'ಕಬಾಲಿ' ಈ ಶುಕ್ರವಾರ ತೆರೆ ಕಾಣಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


