'1/4 ಕೆಜಿ ಪ್ರೀತಿ' ರಸ್ತೆ ಪ್ರಯಾಣದಲ್ಲಿ ಹಿಂಬದಿ ಸವಾರನಾಗಿ ಯೋಗರಾಜ್ ಭಟ್
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ 'ರೋಡ್ ಸಿನೆಮಾ'ಗಳ ಪ್ರಯಾಣ ಹೆಚ್ಚಾಗಿದೆ. ಯೋಗರಾಜ್ ಭಟ್ ಅವರ ಆಶೀರ್ವಾದದೊಂದಿಗೆ ಚೊಚ್ಚಲ ನಿರ್ದೇಶಕ ಸತ್ಯ ಶೌರ್ಯ ಸಾಗರ್ '1/4 ಕೆಜಿ ಪ್ರೀತಿ'

Published On :
ಬೆಂಗಳೂರು: ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ 'ರೋಡ್ ಸಿನೆಮಾ'ಗಳ ಪ್ರಯಾಣ ಹೆಚ್ಚಾಗಿದೆ. ಯೋಗರಾಜ್ ಭಟ್ ಅವರ ಆಶೀರ್ವಾದದೊಂದಿಗೆ ಚೊಚ್ಚಲ ನಿರ್ದೇಶಕ ಸತ್ಯ ಶೌರ್ಯ ಸಾಗರ್ '1/4 ಕೆಜಿ ಪ್ರೀತಿ' ಎನ್ನುವ ರೋಡ್ ಸಿನೆಮಾ ನಿರ್ದೇಶಿಸಲು ಮುಂದಾಗಿದ್ದಾರೆ.
'ಬಾಂಬೆ ಮಿಠಾಯಿ' ಮತ್ತು 'ಟಿಪಿಕಲ್ ಕೈಲಾಸಂ' ಸಿನೆಮಾಗಳಲ್ಲಿ ಸಹನಿರ್ದೇಶಕರಾಗಿ ದುಡಿದಿರುವ ಸತ್ಯ ಇದೆ ಮೊದಲ ಬಾರಿಗೆ ಸ್ವತಂತ್ರವಾಗಿ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ಈ ಸಿನೆಮಾದ ಮೂಲಕ ಹಿತಾ ಚಂದ್ರಶೇಖರ್ ಮತ್ತು ರಿಹಾನ್ ಗೌಡ ಮುಖ್ಯ ನಟರಾಗಿ ಭಡ್ತಿ ಪಡೆಯಲಿದ್ದಾರೆ. ಯೋಗರಾಜ್ ಭಟ್ ಅವರು ನಿರ್ದೇಶನದ ಮೇರೆಗೆ ಹಿತಾ ಮುಖ್ಯ ಪಾತ್ರ ಪಡೆದಿದ್ದಾರಂತೆ.
ಯೋಗರಾಜ್ ಅವರನ್ನು ಒಪ್ಪಿಸುವುದು ತ್ರಾಸದಾಯಕ ಕೆಲಸವಾಗಿತ್ತು ಎನ್ನುವ ಸತ್ಯ "ನಾನು ಯೋಗರಾಜ್ ಭಟ್ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿಲ್ಲ, ಆದರೆ ಅವರು ನನ್ನ ಕಥೆ ಕೇಳಿ ಪೂರ್ಣ ಸಹಕಾರ ನೀಡಿದರು" ಎನ್ನುತ್ತಾರೆ.
ಯೋಗರಾಜ್ ಭಟ್ ಮೂರು ಹಾಡುಗಳನ್ನು ರಚಿಸಿದ್ದು ಜಯಂತ ಕಾಯ್ಕಿಣಿ ಒಂದು ಹಾಡು ರಚಿಸಿದ್ದಾರೆ ಎಂದು ತಿಳಿಸುವ ಸತ್ಯ, ಬಹುತೇಕ ಚಿತ್ರೀಕರಣ ಸಂಪೂರ್ಣವಾಗಿರುವುದಾಗಿಯೂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


