ಸಿಂಗಂ-3ಗೆ ಪತ್ರಕರ್ತೆಯಾದ ಶೃತಿ ಹಾಸನ್
ತಮಿಳಿನ ಸಿಂಗಂ ಹಾಗೂ ಸಿಂಗಂ 2 ಚಿತ್ರದ ಭರ್ಜರಿ ಯಶಸ್ಸಿನ ನಂತರ ಬರುತ್ತಿರುವ ಸೀಕ್ವೆಲ್ 3 ಚಿತ್ರದಲ್ಲಿ ನಟಿ ಶೃತಿ ಹಾಸನ್ ಪತ್ರಕರ್ತೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ...

ಚೆನ್ನೈ: ತಮಿಳಿನ ಸಿಂಗಂ ಹಾಗೂ ಸಿಂಗಂ 2 ಚಿತ್ರದ ಭರ್ಜರಿ ಯಶಸ್ಸಿನ ನಂತರ ಬರುತ್ತಿರುವ ಸೀಕ್ವೆಲ್ 3 ಚಿತ್ರದಲ್ಲಿ ನಟಿ ಶೃತಿ ಹಾಸನ್ ಪತ್ರಕರ್ತೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿರುವ ನಟ ಸೂರ್ಯಗೆ ದೊಡ್ಡ ಪ್ರಕರಣದ ಒಂದಕ್ಕೆ ಸಂಬಂಧಿಸಿದಂತೆ ಸಹಾಯ ಮಾಡುವ ಪತ್ರಕರ್ತೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಕಮಲ್ ಹಾಸನ್ ಅವರ ಸುಭಾಷ್ ನಾಯ್ಡು ಚಿತ್ರದಲ್ಲಿ ಅಭಿನಯಿಸುತ್ತಿರುವ ಶೃತಿ ಹಾಸನ್ ತಮ್ಮ ಭಾಗದ ಚಿತ್ರೀಕರಣ ಮುಕ್ತಾಯದ ನಂತರ ಸಿಂಗಂ-3 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಸಿಂಗಂ ಹಾಗೂ ಸಿಂಗಂ-2 ಚಿತ್ರದ ನಿರ್ದೇಶಕ ಹರಿ ಅವರೇ ಸಿಂಗಂ-3 ಚಿತ್ರವನ್ನು ನಿರ್ದೇಶಿಸುತ್ತಿದ್ದು, ಹರೀಶ್ ಜೈರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


