ಆಗಸ್ಟ್ 12ರಂದು ಸೆಟ್ಟೇರಲಿದೆ ಪ್ರೇಮ್ ನಿರ್ದೇಶನದ ಚಿತ್ರ!
ಶಿವಣ್ಣ ಮತ್ತು ಸುದೀಪ್ ನಟನೆ ಬಹು ನಿರೀಕ್ಷಿತ ಚಿತ್ರ "ಕಲಿ" ಚಿತ್ರಕಥೆಯಲ್ಲಿನ ತೊಡಕಿನಿಂದಾಗಿ ಮುಂದಕ್ಕೆ ಹೋಗಿದ್ದು, ಈ ಗ್ಯಾಪ್ ನಲ್ಲಿ ನಿರ್ದೇಶಕ ಪ್ರೇಮ್ ಇದೇ ಜೋಡಿಯನ್ನು ಇಟ್ಟುಕೊಂಡು ಮತ್ತೊಂದು ಚಿತ್ರದ ತಯಾರಿ ನಡೆಸಿದ್ದಾರೆ.

ಬೆಂಗಳೂರು: ಶಿವಣ್ಣ ಮತ್ತು ಸುದೀಪ್ ನಟನೆ ಬಹು ನಿರೀಕ್ಷಿತ ಚಿತ್ರ "ಕಲಿ" ಚಿತ್ರಕಥೆಯಲ್ಲಿನ ತೊಡಕಿನಿಂದಾಗಿ ಮುಂದಕ್ಕೆ ಹೋಗಿದ್ದು, ಈ ಗ್ಯಾಪ್ ನಲ್ಲಿ ನಿರ್ದೇಶಕ ಪ್ರೇಮ್ ಇದೇ ಜೋಡಿಯನ್ನು ಇಟ್ಟುಕೊಂಡು ಮತ್ತೊಂದು ಚಿತ್ರದ ತಯಾರಿ ನಡೆಸಿದ್ದಾರೆ.
ಕಳೆದ ವಾರವಷ್ಟೇ ನಿರ್ದೇಶಕ ಪ್ರೇಮ್ ಮತ್ತು ಕಲಿ ತಂಡ ಊಟಿ ಬೀಡಿಬಿಟ್ಟು ಚಿತ್ರದ ಸ್ಕ್ರಿಪ್ಟ್ ತಯಾರಿ ಮಾಡಿತ್ತು. ಇದೀಗ ಈ ತಂಡದಿಂದ ಹೊರ ಬಿದ್ದಿರುವ ಮಾಹಿತಿ ಪ್ರಕಾರ ಶಿವಣ್ಣ, ಸುದೀಪ್ ಮತ್ತು ಪ್ರೇಮ್ ಜೋಡಿಯ ನೂತನ ಚಿತ್ರ ಇದೇ ಆಗಸ್ಟ್ 12ರಂದು ಸೆಟ್ಟೇರಲಿದೆ. ಮೂಲಗಳ ಪ್ರಕಾರ ಸಿಆರ್ ಮನೋಹರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಚಿತ್ರಕಥೆ ಮತ್ತು ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ಚಿತ್ರತಂಡ ಹೇಳಿಕೊಂಡಿರುವಂತೆ ಈ ನೂತನ ಚಿತ್ರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತೆರೆಕಾಣಲಿದೆಯಂತೆ. ಹೀಗಾಗಿ ನಿರ್ದೇಶಕ ಪ್ರೇಮ್ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ಸಂಗೀತ ನಿರ್ದೇಶಕರಿಗಾಗಿ ಶೋಧ ನಡೆಸಿದ್ದಾರಂತೆ. ಕನ್ನಡ ಭಾಷೆಯಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದರೆ, ಅದರ ವಿರುದ್ಧದ ಅಂದರೆ ಖಳನ ಪಾತ್ರದಲ್ಲಿ ನಟ ಸುದೀಪ್ ಅಭಿನಯಿಸುತ್ತಿದ್ದಾರೆ. ಅಂತೆಯೇ ಮೂರು ಭಾಷೆಗಳಲ್ಲಿ ಸುದೀಪ್ ಅವರೇ ಖಳನಾಗಿರಲಿದ್ದು, ತೆಲುಗು ಭಾಷೆಗಾಗಿ ನಟ ನಾಗಾರ್ಜುನ ಮತ್ತು ತಮಿಳಿಗಾಗಿ ತಮಿಳಿನ ಖ್ಯಾತ ಹೀರೋ ಒಬ್ಬರನ್ನು ಚಿತ್ರತಂಡ ಸಂಪರ್ಕಿಸಿದೆಯಂತೆ.
ತೆಲುಗು ಮತ್ತು ತಮಿಳು ಭಾಷೆಗಳ ಹೀರೋಗಳು ಪಕ್ಕಾ ಆದ ಬಳಿಕ ಅಧಿಕೃತವಾಗಿ ನಿರ್ದೇಶಕ ಪ್ರೇಮ್ ಚಿತ್ರದ ಬಗ್ಗೆ ಮಾಹಿತಿ ನೀಡಲಿದ್ದಾರಂತೆ. ಇನ್ನು ಪ್ರಸ್ತುತ ನಿರ್ದೇಶಕ ಪ್ರೇಮ್ ಮೊದಲು ಹಾಡಿನ ರೆಕಾರ್ಡಿಂಗ್ ಮೂಲಕ ಇನ್ನೂ ಹೆಸರಿಡದ ಈ ಚಿತ್ರದ ಕೆಲಸ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


