ಫಸ್ಟ್ ರ್ಯಾಂಕ್ ರಾಜು ತಂಡದೊಂದಿಗೆ ಶಿವಲಿಂಗ ನಿರ್ಮಾಪಕರಿಂದ ಚಿತ್ರ ನಿರ್ಮಾಣ
ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಯದ ಸೂಪರ್ ಹಿಟ್ ಚಿತ್ರ ಶಿವಲಿಂಗದ ನಿರ್ಮಾಪಕರು ಇದೀಗ ಫಸ್ಟ್ ರ್ಯಾಂಕ್ ರಾಜು ಚಿತ್ರತಂಡದೊಂದಿಗೆ ಹೊಸ ಪ್ರಾಜೆಕ್ಟ್

ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಯದ ಸೂಪರ್ ಹಿಟ್ ಚಿತ್ರ ಶಿವಲಿಂಗದ ನಿರ್ಮಾಪಕರು ಇದೀಗ ಫಸ್ಟ್ ರ್ಯಾಂಕ್ ರಾಜು ಚಿತ್ರತಂಡದೊಂದಿಗೆ ಹೊಸ ಪ್ರಾಜೆಕ್ಟ್ ಕೈಹಾಕಿದ್ದಾರೆ.
ಫಸ್ಟ್ ರ್ಯಾಂಕ್ ರಾಜು ನಂತ ಸೂಪರ್ ಹಿಟ್ ಚಿತ್ರ ನೀಡಿದ ನಿರ್ದೇಶಕ ನರೇಶ್ ಕುಮಾರ್ ತಂಡದೊಂದಿಗೆ ಸುರೇಶ್ ಆರ್ಟ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಪಕ ಕೆಎಸ್ ಸುರೇಶ್ ಹೊಸ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನು ಸ್ವತ ನರೇಶ್ ಕುಮಾರ್ ಅವರೇ ಹೇಳಿದ್ದಾರೆ.
ಗೋವಿಂದಾಯನಮಃ, ಶ್ರಾವಣಿ ಸುಬ್ರಮಣ್ಯ ಹಾಗೂ ಇತ್ತೀಚಿನ ಬ್ಲಾಕ್ ಬಸ್ಟರ್ ಚಿತ್ರ ಶಿವಲಿಂಗ ಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಚಿತ್ರಕ್ಕೆ ಗುರುನಂದನ್ ಅವರೇ ನಾಯಕನಾಗಿ ನಟಿಸುವುದಕ್ಕೆ ಸುರೇಶ್ ಅವರು ಓಕೆ ಎಂದಿದ್ದಾರೆ. ಇನ್ನು ಸ್ಮೈಲ್ ಪ್ಲೀಸ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ಮೈಲ್ ಪ್ಲೀಸ್ ನಂತರ ನರೇಶ್ ಕುಮಾರ್ ಚಿತ್ರದಲ್ಲಿ ಗುರುನಂದನ್ ನಟಿಸಲಿದ್ದು ಜತೆಗಾರ್ತಿಯ ಹುಡುಕಾಟದಲ್ಲಿ ಚಿತ್ರ ತಂಡವಿದೆ.
ಫಸ್ಟ್ ರ್ಯಾಂಕ್ ರಾಜು ಚಿತ್ರದ ಛಾಯಾಗ್ರಾಹಕ, ನಟಿ ಹಾಗೂ ನಿರ್ಮಾಪಕರ ಹೊರತು ಉಳಿದ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡಲಿದೆ ಎಂದು ನರೇಶ್ ಕುಮಾರ್ ಹೇಳಿದ್ದಾರೆ.
ಫಸ್ಟ್ ರ್ಯಾಂಕ್ ರಾಜು ಚಿತ್ರ ನಮ್ಮ ಶಿಕ್ಷಣ ಕುರಿತಾಗಿತ್ತು. ಇದೀಗ ನರೇಶ್ ಅವರು ಜೀವನ ಕುರಿತಾದ ಚಿತ್ರ ನಿರ್ದೇಶನ ಮಾಡಲಿದ್ದು, ಹ್ಯಾಸದೊಂದಿಗೆ ಜೀನವ ಪಾಠ ಹೇಳಲಿದ್ದಾರೆ ನಿರ್ದೇಶಕರು. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಮಡಿಕೇರಿ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


