ಸಿನಿಮಾ ಸುದ್ದಿ

ಶಬರಿ ಮಲೆ ಅಯ್ಯಪ್ಪ ಮಾಲೆ ಧರಿಸಿದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅವರು ಬುಧವಾರದಿಂದ ಅಯ್ಯಪ್ಪ ಮಾಲಾಧಾರಿಯಾಗಿದ್ದಾರೆ.

ಶಬರಿ ಮಲೆ ಅಯ್ಯಪ್ಪ ಮಾಲೆ ಧರಿಸಿದ ಶಿವಣ್ಣ
ನಟ ಶಿವರಾಜ್ ಕುಮಾರ್
Published On :

ಬೆಂಗಳೂರು:  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅವರು ಬುಧವಾರದಿಂದ ಅಯ್ಯಪ್ಪ ಮಾಲಾಧಾರಿಯಾಗಿದ್ದಾರೆ.

ಬೆಂಗಳೂರಿನ ದೇಗುಲವೊಂದರಲ್ಲಿ ಶಿವರಾಜ್ ಕುಮಾರ್ ಅವರು ಅಯ್ಯಪ್ಪ ಮಾಲೆ ಧರಿಸಿದ್ರು. ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಜೊತೆಗಿದ್ರು. ಶಿವಣ್ಣ ಕಳೆದ ಕೆಲ ವರ್ಷಗಳಿಂದ ಶಬರಿಮಲೆಗೆ ಹೋಗುತ್ತಿದ್ದಾರೆ. ಪ್ರತಿ ಸಾರಿ ಶಿವಣ್ಣನಿಗೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರು ಸಾಥ್ ನೀಡುತ್ತಿದ್ದರು. ಆದರೆ ರಾಘವೇಂದ್ರ ರಾಜ್ ಕುಮಾರ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರು ಈ ಬಾರಿ ಶಬರಿಮಲೆಗೆ ತೆರಳುತ್ತಿಲ್ಲವಂತೆ. ಪುನೀತ್ ರಾಜ್ ಕುಮಾರ್ ಚಕ್ರವ್ಯೂಹ ಸಿನಿಮಾದಲ್ಲಿ ಬ್ಯುಸಿ ಇರೋದರಿಂದ ಅವರೂ ಹೋಗುತ್ತಿಲ್ಲ.

ಶಿವಣ್ಣ ಕೆಲ ದಿನಗಳ ಹಿಂದೆಯೇ ಮಾಲೆ ಹಾಕಬೇಕಾಗಿತ್ತು. ಆದ್ರೆ ಇಫಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗಿಯಾಗಲು ಶಿವರಾಜ್ ಕುಮಾರ್ ಹೈದ್ರಾಬಾದ್ ಗೆ ತೆರಳಿದ್ದರಿಂದ ಅವರು ನಿನ್ನೆ ಮಾಲೆ ಧರಿಸಿದ್ದು, ಫೆಬ್ರವರಿ 11 ರವರೆಗೂ ವ್ರತದಲ್ಲಿರಲಿದ್ದಾರೆ. ಫೆಬ್ರವರಿ 12 ರಂದು ಶಿವರಾಜ್ ಕುಮಾರ್ ಶಬರಿಮಲೆಗೆ ಹೊರಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.