ಸಿನಿಮಾ ಸುದ್ದಿ

ಟ್ವಿಟ್ಟರ್ ಖಾತೆ ತೆರೆದ ಕಮಲ್ ಹಾಸನ್:24 ಗಂಟೆಗಳಲ್ಲಿ 34.000 ಹಿಂಬಾಲಕರು

ಬಹುಭಾಷಾ ನಟ ಕಮಲ ಹಾಸನ್‌ ಅವರು 67ನೇ ಗಣರಾಜ್ಯೋತ್ಸವ ದಿನದಂದು ಟ್ವಿಟರ್‌ ನಲ್ಲಿ ತಮ್ಮ ಖಾತೆ ತೆರದಿದ್ದಾರೆ. ...

ಟ್ವಿಟ್ಟರ್ ಖಾತೆ ತೆರೆದ ಕಮಲ್ ಹಾಸನ್:24 ಗಂಟೆಗಳಲ್ಲಿ 34.000 ಹಿಂಬಾಲಕರು
ಕಮಲ್ ಹಾಸನ್
Published On :

ನವದೆಹಲಿ: ಬಹುಭಾಷಾ ನಟ ಕಮಲ ಹಾಸನ್‌ ಅವರು 67ನೇ ಗಣರಾಜ್ಯೋತ್ಸವ ದಿನದಂದು ಟ್ವಿಟರ್‌ ನಲ್ಲಿ ತಮ್ಮ ಖಾತೆ ತೆರದಿದ್ದಾರೆ.

ಗಣರಾಜ್ಯೋತ್ಸವ ಶುಭಾಶಯ ಹೇಳುವದರೊಂದಿಗೆ ಟ್ವಿಟ್ಟರ್‌ ಗೆ ಸೇರಿದ ಮೊದಲ ದಿನವೇ ಕಮಲ ಹಾಸನ್‌ ಅವರು ವಿಡಿಯೋ ಚಿತ್ರಿಕೆಯೊಂದರ ಮೂಲಕ ಅಭಿಮಾನಿಗಳನ್ನು ಸೆಳೆದುಕೊಂಡಿದ್ದಾರೆ. ಟ್ವಿಟರ್ ಗೆ ಪಾದಾರ್ಪಣೆ ಮಾಡಲು ಗಣ ರಾಜ್ಯೋತ್ಸವ ದಿನವನ್ನೆ ಆಯ್ಕೆ ಮಾಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಅಪಾರ ಸಂತಸ ತಂದಿದೆ.

ಟ್ವಿಟರ್‌ ಗೆ ಸೇರಿದ 24 ಗಂಟೆಗಳಲ್ಲೇ ಕಮಲ ಹಾಸನ್‌ ಅವರ ಹಿಂಬಾಲಕರ ಸಂಖ್ಯೆ 34,000 ದಾಟಿದೆ. ಪರಿಪೂರ್ಣ ದೇಶಪ್ರೇಮವನ್ನು ಬಿಂಬಿಸುವ ರೀತಿಯಲ್ಲಿ ಕಮಲ ಹಾಸನ್‌ ಜನಗಣಮನ ಹಾಡುವ ವಿಡಿಯೋ ಚಿತ್ರಿಕೆಯು ಟ್ವಿಟ್ಟರ್‌ ಅಭಿಮಾನಿಗಳಿಗೆ ಅಪಾರ ಸಂತಸ ನೀಡಿದೆ.

ತನ್ನ ತಂದೆ ಟ್ವಿಟ್ಟರ್‌ಗೆ ಸೇರಿರುವುದು ಮಗಳು ಶ್ರುತಿ ಹಾಸನ್‌ಗೆ ತುಂಬಾ ಖುಷಿ ಕೊಟ್ಟಿದೆಯಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.