ಪುನೀತ್ ಚಕ್ರವ್ಯೂಹಕ್ಕೆ ಶೋಭಿ ನೃತ್ಯನಿರ್ದೇಶನ
ಪರಭಾಷಾ ನಟರಾದ ಜೂನಿಯರ್ ಎನ್ ಟಿ ಆರ್, ಕಾಜಲ್ ಅಗರವಾಲ್ ಹಾಡಿದ್ದಾಯಿತು ಈಗ ಪುನೀತ್ ರಾಜಕುಮಾರ್ ನಟನೆಯ 'ಚಕ್ರವ್ಯೂಹ' ನೃತ್ಯನಿರ್ದೇಶನ ಮಾಡಲು

ಬೆಂಗಳೂರು: ಪರಭಾಷಾ ನಟರಾದ ಜೂನಿಯರ್ ಎನ್ ಟಿ ಆರ್, ಕಾಜಲ್ ಅಗರವಾಲ್ ಹಾಡಿದ್ದಾಯಿತು ಈಗ ಪುನೀತ್ ರಾಜಕುಮಾರ್ ನಟನೆಯ 'ಚಕ್ರವ್ಯೂಹ' ನೃತ್ಯನಿರ್ದೇಶನ ಮಾಡಲು ಶೋಭಿ ಪಲುರಾಜ್ ಬರಲಿದ್ದಾರೆ.
ಜೂನಿಯರ್ ಎನ್ ಟಿ ಆರ್ ಹಾಡಿರುವ 'ಗೆಳೆಯ ಗೆಳೆಯ' ಹಾಡು ಚಿತ್ರದಲ್ಲಿ ಪುನೀತ್ ಅವರನ್ನು ಪರಿಚಯಿಸುವ ಹಾಡಾಗಿದ್ದು ಇದಕ್ಕೆ ನೃತ್ಯ ನಿರ್ದೇಶನ ಮಾಡಲು ಶೋಭಿ ಬೆಂಗಳೂರಿಗೆ ಬಂದಿಳಿದಿದ್ದಾರಂತೆ. "ಹೆಸರಘಟ್ಟ ಮತ್ತು ಒರಾಯಾನ್ ಮಾಲ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ" ಎಂದು ಮೂಲಗಳು ತಿಳಿಸಿವೆ.
ಸರವಣನ್ ನಿರ್ದೇಶನದ ಚಕ್ರವ್ಯೂಹದಲ್ಲಿ ರಚಿತಾ ರಾಮ್ ನಾಯಕ ನಟಿ ಮತ್ತು ಅರುಣ್ ವಿಜಯ್ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಷಣ್ಮುಗ ಸುಂದರಂ ಅವರ ಸಿನೆಮ್ಯಾಟೋಗ್ರಫಿ ಮತ್ತು ಎಸ್ ಎಸ್ ತಮನ್ ಅವರ ಸಂಗೀತ ಚಿತ್ರಕ್ಕಿದ್ದು ಜನವರಿ ಅಂತ್ಯಕ್ಕೆ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ ೧೭ ರಂದು ಸಿನೆಮಾ ಬಿಡುಗಡೆಯಾಗಲಿದೆ ಎನ್ನುತ್ತವೆ ಮೂಲಗಳು. ಫೆಬ್ರವರಿ ೧೨ ಕ್ಕೆ ಆಡಿಯೋ ಬಿಡುಗಡೆಯಾಗುವ ಸಾಧ್ಯತೆಯಿದ್ದು ಜೂನಿಯರ್ ಎನ್ ಟಿ ಆರ್ ಆಡಿಯೋ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


