ಸಿನಿಮಾ ಸುದ್ದಿ

ಜಪಾನ್ ನಲ್ಲಿ ನಡೆಯಲಿದೆ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರದ ಶೂಟಿಂಗ್

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜಪಾನ್ ನಲ್ಲಿ ಚಿತ್ರೀಕರಣ ನಡೆಸಲು ಕೋಟಿಗೊಬ್ಬ-2 ಚಿತ್ರ ತಂಡ ನಿರ್ಧರಿಸಿದೆ. ಸುದೀಪ್‌ ಅಭಿನಯದ ...

ಜಪಾನ್ ನಲ್ಲಿ ನಡೆಯಲಿದೆ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರದ ಶೂಟಿಂಗ್
ಸುದೀಪ್
Published On :

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜಪಾನ್ ನಲ್ಲಿ ಚಿತ್ರೀಕರಣ ನಡೆಸಲು ಕೋಟಿಗೊಬ್ಬ-2 ಚಿತ್ರ ತಂಡ ನಿರ್ಧರಿಸಿದೆ. ಸುದೀಪ್‌ ಅಭಿನಯದ 'ಕೋಟಿಗೊಬ್ಬ -2' ಚಿತ್ರದ ಶೂಟಿಂಗ್ ಮುಗಿದಿದ್ದು. ಕೇವಲ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

ಈ ಹಾಡುಗಳ ಚಿತ್ರೀಕರಣವನ್ನು ಜಪಾನಿನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಕೆ ಎಸ್ ರವಿಕುಮಾರ್ ನಿರ್ದೇಶನದ 'ಕೋಟಿಗೊಬ್ಬ 2' ತಮಿಳು ಭಾಷೆಯಲ್ಲಿ ತಯಾರಿಸಲಾಗುತ್ತಿದೆ.

ಮಲೇಷ್ಯಾ, ಸಿಂಗಾಪುರ, ಅಮೆರಿಕಾ ಇವೆಲ್ಲಾ ಚಿತ್ರಗಳಲ್ಲಿ ತೋರಿಸೋದು ಬಹಳ ಕಾಮನ್ ಆಗಿದೆ. ಈಗ ಜನ ಹೊಸ ಲೊಕೇಶನ್‌ಗಳನ್ನು ನೋಡೋಕೆ ಇಷ್ಟಪಡ್ತಾರೆ. ಹಾಗೆ ನೋಡಿದರೆ ಜಪಾನ್‌ನಲ್ಲಿ ಶೂಟಿಂಗ್ ಆಗಿರೋ ಚಿತ್ರಗಳು ಬಹಳ ಕಡಿಮೆ.

ಕನ್ನಡದ ಚಿತ್ರಗಳಂತೂ ಜಪಾನ್‌ನಲ್ಲಿ ಶೂಟಿಂಗ್ ಮಾಡೇ ಇಲ್ಲ. ಹಾಗಾಗಿ ಎರಡು ಹಾಡುಗಳನ್ನು ಜಪಾನಿನ ಒಂದಷ್ಟು ಸುಂದರ ಲೊಕೇಶನ್‌ಗಳಲ್ಲಿ ಚಿತ್ರೀಕರಿಸುವ ಬಗ್ಗೆ ನಿರ್ಮಾಪಕರು ಆಲೋಚನೆ ಮಾಡ್ತಿದ್ದಾರಂತೆ. ಆದರೆ ಇದರ ಕುರಿತು ನಿರ್ಧಾರ ಮಾತ್ರ ನಿರ್ದೇಶಕ ರವಿಕುಮಾರ್‌ ಅವರದ್ದೇ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.