ಉಪ್ಪಿ ವಿಶಾಲ ಹೃದಯಿ: ರಂಗಿತರಂಗ ನಟಿ ಅವಂತಿಕಾ
'ರಂಗಿತರಂಗ'ದ ಮೂಲಕ ಸಿನೆಮಾ ಪಾದಾರ್ಪಣೆ ಮಾಡಿದ ನಟಿ ಅವಂತಿಕಾ ಶೆಟ್ಟಿ ಈಗ ತಮ್ಮ ಎರಡನೆಯ ಸಿನೆಮಾವಾಗಿ 'ಕಲ್ಪನಾ-೨'ರಲ್ಲಿ ನಟಿಸುತ್ತಿದ್ದಾರೆ. ತಮಿಳಿನ 'ಕಾಂಚನ-೨'

ಬೆಂಗಳೂರು: 'ರಂಗಿತರಂಗ'ದ ಮೂಲಕ ಸಿನೆಮಾ ಪಾದಾರ್ಪಣೆ ಮಾಡಿದ ನಟಿ ಅವಂತಿಕಾ ಶೆಟ್ಟಿ ಈಗ ತಮ್ಮ ಎರಡನೆಯ ಸಿನೆಮಾವಾಗಿ 'ಕಲ್ಪನಾ-೨'ರಲ್ಲಿ ನಟಿಸುತ್ತಿದ್ದಾರೆ. ತಮಿಳಿನ 'ಕಾಂಚನ-೨' ರ ಈ ರಿಮೇಕ್ ಸಿನೆಮಾದಲ್ಲಿ ಮೂಲದಲ್ಲಿ ತಪ್ಸಿ ಪನ್ನು ಮಾಡಿದ ಪಾತ್ರದಲ್ಲಿ ಅವಂತಿಕಾ ಕಾಣಿಸಿಕೊಂಡಿದ್ದಾರೆ. ಇವರದ್ದು ಇನ್ಸ್ಪೆಕ್ಟರ್ ಪಾತ್ರ. ಅಲ್ಲದೆ ಸಿನೆಮಾದಲ್ಲಿ ಉಪೇಂದ್ರ ಮತ್ತು ಪ್ರಿಯಾಮಣಿ ಕೂಡ ನಟಿಸುತ್ತಿದ್ದಾರೆ.
ಉಪೇಂದ್ರ ಅವರ ಜೊತೆಗೆ ಎರಡು ಹಂತಗಳ ಚಿತ್ರೀಕರಣ ಮುಗಿಸಿರುವ ನಟಿ "ನಾನಿನ್ನೂ ಪ್ರಿಯಾಮಣಿ ಅವರನ್ನು ಭೇಟಿ ಮಾಡಿಲ್ಲ, ಸದ್ಯಕ್ಕೆ ಚಿತ್ರೀಕರಣದ ಪಾತ್ರವೆಲ್ಲವೂ ಉಪೇಂದ್ರ ಅವರ ಜೊತೆಗಿತ್ತು. ಇಡಿ ಸೆಟ್ ನಲ್ಲಿ ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದರಿಂದ ನನಗೆ ಸಂವಹನ ಕಷ್ಟವಾಯಿತು. ರಂಗಿತರಂಗದಲ್ಲಾದರೆ ನಾನು ತುಳು ಮಾತನಾಡಿ ಉಳಿದುಕೊಂಡೆ" ಎನ್ನುತ್ತಾರೆ.
ಈ ಪಾತ್ರ ಮಾಡುವುದು ಅಷ್ಟೇನೂ ಕಷ್ಟ ಆಗಲಿಲ್ಲ ಎನ್ನುವ ಅವರು ಉಪೇಂದ್ರ ಅವರನ್ನು ಮನಸಾರೆ ಹೊಗಳುತ್ತಾರೆ. "ಅವರು ವಿಶಾಲ ಹೃದಯಿ. ಚಿತ್ರೀಕರಣಕ್ಕೆ ಅವರು ಹೆಚ್ಚಿನ ಶ್ರಮ ವಹಿಸುತ್ತಾರೆ" ಎನ್ನುತ್ತಾರೆ.
ಅನಂತರಾಜು ಅವರ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೆ ಚಿತ್ರೀಕರಣ ಮುಗಿಸುವ ಉಮೇದಿನಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


