ಕವಿರಾಜ್ ಗೆ ಪರೀಕ್ಷೆಯ ಸಮಯ; ನಾಳೆ 'ಮದುವೆಯ ಮಮತೆಯ ಕರೆಯೋಲೆ' ತೆರೆಗೆ
ತೂಗುದೀಪ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಕವಿರಾಜ್ ಅವರ ಚೊಚ್ಚಲ ಚಿತ್ರ 'ಮದುವೆಯ ಮಮತೆಯ ಕರೆಯೋಲೆ' ರಾಜ್ಯಾದ್ಯಂತ ನಾಳೆ ಬಿಡುಗಡೆಯಾಗಲಿದೆ.

ಬೆಂಗಳೂರು: ತೂಗುದೀಪ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಕವಿರಾಜ್ ಅವರ ಚೊಚ್ಚಲ ಚಿತ್ರ 'ಮದುವೆಯ ಮಮತೆಯ ಕರೆಯೋಲೆ' ರಾಜ್ಯಾದ್ಯಂತ ನಾಳೆ ಬಿಡುಗಡೆಯಾಗಲಿದೆ. ಗೀತರಚನಕಾರ ಈಗ ನಿರ್ದೇಶಕನಾಗಿ ಭಡ್ತಿ ಹೊಂದಿದ್ದು ಈ ಚಿತ್ರದಲ್ಲಿ ಅಮೂಲ್ಯ ನಾಯಕನಟಿಯಾಗಿದ್ದರೆ ಹೊಸ ಪರಿಚಯ ಸೂರಜ್ ಗೌಡ ನಾಯಕ ನಟ.
"ನಾನು ಕವಿರಾಜ್ ಅವರನ್ನು ೧೦ ವರ್ಷದಿಂದ ಬಲ್ಲೆ. ಕವಿರಾಜ್ ಸ್ಕ್ರಿಪ್ಟ್ ಓದಿದಾಕ್ಷಣ, ಈ ಪಾತ್ರ ನನಗಾಗಿಯೇ ಮಾಡಲಾಗಿದೆ ಎಂದೆನಿಸಿತು. ಕಥೆ ಕೂಡ ಬಹಳ ಹಿಡಿಸಿತು. ಅಲ್ಲದೆ ಅನಂತ ನಾಗ್ ಜೊತೆಗೆ ನಟಿಸಿದ ಸಿನೆಮಾಗಳು ನನಗೆ ಅದೃಷ್ಟ ತಂದಿವೆ. ಈ ಸಿನೆಮಾದಲ್ಲೂ ಅವರು ನನ್ನ ತಂದೆಯ ಪಾತ್ರ ಮಾಡಿದ್ದಾರೆ" ಎನ್ನುತ್ತಾರೆ ಅಮೂಲ್ಯ.
"ಅತಿ ದೊಡ್ಡ ನಿರ್ಮಾಣ ಸಂಸ್ಥೆ ಮತ್ತು ಕವಿರಾಜ್ ಜೊತೆಗೆ ಮೊದಲ ಸಿನೆಮಾದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಬಹಳ ಸಂತಸ ತಂದಿದೆ. ಅನಂತನಾಗ್, ಅಚ್ಯುತ್ ಕುಮಾರ್ ಮತ್ತು ಅಮೂಲ್ಯ ಅವರಿಗೆ ಬಹಳಷ್ಟು ಜನ ಅಭಿಮಾನಿಗಳಿದ್ದಾರೆ. ಚಿತ್ರತಂಡ ನನಗೆ ಬಹಳ ಸಹಾಯ ಮಾಡಿತು" ಎನ್ನುತ್ತಾರೆ ನಾಯಕ ನಟ ಸೂರಜ್.
ಸಿನೆಮಾಗೆ ಕೆ ಎಸ್ ಚಂದ್ರಶೇಖರ್ ಅವರ ಸಿನೆಮ್ಯಾಟೋಗ್ರಫಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


