ಅಹಿಂಸೆ ಮತ್ತು ಶಾಂತಿಯ ಮೊರೆ ಹೋಗುವಂತೆ ಜಾಟ್ ಸಮುದಾಯಕ್ಕೆ ಮಲ್ಲಿಕಾ ಶೆರಾವತ್ ಮನವಿ
ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಹರ್ಯಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಜಾಟ್ ಸಮುದಾಯಕ್ಕೆ ಶಾಂತಿ ಕಾಪಾಡುವಂತೆ ನಟಿ ಮಲ್ಲಿಕಾ ಶೆರಾವತ್ ಮನವಿ

ಮುಂಬೈ: ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಹರ್ಯಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಜಾಟ್ ಸಮುದಾಯಕ್ಕೆ ಶಾಂತಿ ಕಾಪಾಡುವಂತೆ ನಟಿ ಮಲ್ಲಿಕಾ ಶೆರಾವತ್ ಮನವಿ ಮಾಡಿದ್ದಾರೆ.
ಸರ್ಕಾರಿ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕೋರಿ ಜಾಟ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸೆಯ ರೂಪ ಪಡೆದಿದ್ದು ಇಲ್ಲಿಯವರೆಗೂ ೧೬ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಹರ್ಯಾಣದ ಹಿಸರ್ ಮೂಲದ 'ಮರ್ಡರ್' ನಟಿ ಟ್ವಿಟ್ಟರ್ ಮೂಲಕ ಈ ಮನವಿ ಮಾಡಿದ್ದಾರೆ.
"ಶಾಂತಿ ಮತ್ತು ಅಹಿಂಸೆ ಕಾಪಾಡುವಂತೆ ಜಾಟ್ ಸಮುದಾಯದಲ್ಲಿ ಮನವಿ ಮಾಡುತ್ತೇನೆ" ಎಂದು ಮಲ್ಲಿಕಾ ಟ್ವೀಟ್ ಮಾಡಿದ್ದಾರೆ.
ಜಾಟ್ ಸಮುದಾಯದ ಮತ್ತೊಬ್ಬ ನಟ ರಣದೀಪ್ ಹೂಡಾ ಕೂಡ ಕಳೆದ ವಾರ ಶಾಂತಿಯುತ ಮತ್ತು ಅಹಿಂಸಾತ್ಮಕ ಪ್ರತಿಭಟನೆ ನಡೆಸಲು ಕೋರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


