'ನೀರ್ಜಾ' ಮೊದಲ ದಿನದ ಗಳಿಕೆ ೪.೭ ಕೋಟಿ
ಅಪಹರಣಗೊಂಡ ವಿಮಾನವೊಂದರೆ ಒತ್ತೆಯಾಳುಗಳನ್ನು ರಕ್ಷಿಸಲು ತನ್ನ ಪ್ರಾಣ ತೊರೆದ ನೀರಜಾ ಭಾನೋಟ್ ಅವರ ಬಯೋಪಿಕ್, ಸೋನಮ್ ಕಪೂರ್ ಅಭಿನಯಿಸಿರುವ 'ನೀರ್ಜಾ'

ಮುಂಬೈ: ಅಪಹರಣಗೊಂಡ ವಿಮಾನವೊಂದರೆ ಒತ್ತೆಯಾಳುಗಳನ್ನು ರಕ್ಷಿಸಲು ತನ್ನ ಪ್ರಾಣ ತೊರೆದ ನೀರಜಾ ಭಾನೋಟ್ ಅವರ ಬಯೋಪಿಕ್, ಸೋನಮ್ ಕಪೂರ್ ಅಭಿನಯಿಸಿರುವ 'ನೀರ್ಜಾ' ಸಿನೆಮಾದ ಗಳಿಕೆ ಮೊದಲ ದಿನವೇ ೪ ಕೋಟಿಗಿಂತಲೂ ಹೆಚ್ಚಿದೆ.
ರಾಮ್ ಮಾಧ್ವಾನಿ ನಿರ್ದೇಶನದ ಸಿನೆಮಾ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನದ ಅಂತ್ಯದ ಗಳಿಕೆ ೪.೭ ಕೋಟಿ ಇದ್ದು, ಜನರ ಮಾತಿನ ನಡುವೆ ಜನಪ್ರಿಯವಾಗಿ ಮುನ್ನಡೆದಿದೆ ಎನ್ನಲಾಗಿದೆ.
"ಚಿತ್ರಮಂದಿರಗಳಲ್ಲಿ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆಯಿಂದ ನಾನು ವಿನೀತನಾಗಿದ್ದೇನೆ. ಒಳ್ಳೆಯ ವಿಷಯ ಇರುವ ಸಿನೆಮಾವನ್ನು ಜನ ಎದುರು ನೋಡುತ್ತಾರೆ ಎಂಬುದಕ್ಕೆ ಇದು ಉದಾಹರಣೆ" ಎಂದು ಸಿನೆಮಾದ ಸಹನಿರ್ಮಾಪಕ ಅತುಲ್ ಕಸ್ಬೇಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ನೀರ್ಜಾ' ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಗಳಿಗೆ ಕಾಣಲಿದೆ ಎನ್ನುತಾರೆ ಸಿನೆಮಾ ಮಾರುಕಟ್ಟೆ ಪಂಡಿದ ತರಣ್ ಆದರ್ಶ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


