'ಮಾಸ್ತಿ ಗುಡಿ' ಗೆ ೮-ಪ್ಯಾಕ್ ವಿಲನ್
ನಾಗಶೇಖರ್ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕ ನಟನಾಗಿರುವ 'ಮಾಸ್ತಿ ಗುಡಿ' ಸಿನೆಮಾದಲ್ಲಿ ಅತ್ಯುತ್ತಮ ದೇಹದಾಢ್ಯದ ಅನಿಲ್ ಕುಮಾರ್

ಬೆಂಗಳೂರು: ನಾಗಶೇಖರ್ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕ ನಟನಾಗಿರುವ 'ಮಾಸ್ತಿ ಗುಡಿ' ಸಿನೆಮಾದಲ್ಲಿ ಅತ್ಯುತ್ತಮ ದೇಹದಾಢ್ಯದ ಅನಿಲ್ ಕುಮಾರ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ವಿಜಯ್ ಎದುರಿಗೆ ನಟಿಸಲು ಅನಿಲ್, ಪಾನಿ ಪೂರಿ ಕಿಟ್ಟಿ ಅವರ ಬಳಿ ತರಬೇತಿ ಪಡೆಯುತ್ತಿದ್ದು ೮-ಪ್ಯಾಕ್ ದೇಹವನ್ನು ಹುರಿಗೊಳಿಸುತ್ತಿದ್ದಾರಂತೆ.
ಖಳನಾಯಕನ ದೇಹದ ಒಳ್ಳೆಯ ಲುಕ್ ಸಿನೆಮಾದ ಹೀರೋ ಪ್ರದರ್ಶನಕ್ಕೆ ಪುಷ್ಟಿ ನೀಡುತ್ತದೆ ಎಂಬುದು ೨೫ ಚಿತ್ರಗಳಲ್ಲಿ ನಟಿಸಿರುವ ಅನಿಲ್ ಅವರ ಅಭಿಮತ. ವಿಲನ್ ಗಳೆಂದರೆ ಬರೀ ಏಟು ತಿನ್ನುವವರಲ್ಲ ಅವರಲ್ಲೂ ವಿವಿಧ ಪಾತ್ರಗಳಿರುತ್ತವೆ. ಸರಿಯಾದ ಖಳನಾಯಕನೊಂದಿಗೆ ಜೋಡಿಯಾದಾಗಲೇ ಹಿರೋ ಪಾತ್ರದ ಖದರ್ ಹೆಚ್ಚುವುದು ಎನ್ನುತ್ತಾರೆ ಅನಿಲ್. ನಾಗಶೇಖರ್ ಅವರ ಸಿನೆಮಾದಲ್ಲಿ ಅಂತಹ ಒಂದು ಪಾತ್ರವನ್ನು ಪಡೆದಿರುವುದಕ್ಕೆ ಹೆಮ್ಮೆ ಎನ್ನುತ್ತಾರೆ.
ತಮ್ಮ ಸಿನೆಮಾ ವೃತ್ತಿಜೀವನಕ್ಕೂ ವಿಜಯ್ ಅವರೇ ಕಾರಣಕರ್ತರು ಎನ್ನುವ ಅನಿಲ್, ಆಕಸ್ಮಿಕವಾಗಿ ಒಮ್ಮೆ ಕೃಷ್ಣ ರಾವ್ ಉದ್ಯಾನವನದಲ್ಲಿ ವಿಜಯ್ ಅವರನ್ನು ಭೇಟಿಯಾಗಿದ್ದರಂತೆ. "ನಾನು ಸಂಸ್ಥೆಯೊಂದಕ್ಕೆ ಕೆಲಸ ಮಾಡಿಕೊಂಡು ಹೊಡೆದಾಟ, ಬಾಕ್ಸಿಂಗ್, ಕುಂಗ್ ಫು, ಕಿಕ್ ಬಾಕ್ಸಿಂಗ್ ಇವುಗಳಲ್ಲಿ ಪರಿಣತಿ ಹೊಂದಿದ್ದೆ. ನನ್ನ ಗೆಳೆಯ ವರದರಾಜ್ ಅವರಿಂದ ನನ್ನ ಬಗ್ಗೆ ತಿಳಿದ ವಿಜಯ್ ನನ್ನನ್ನು ಆರಿಸಿಕೊಂಡರು. 'ದುನಿಯಾ'ದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದೆ. ನಂತರ ವಿಜಯ್ ಅವರ ಎಲ್ಲ ಸಿನೆಮಾಗಳಲ್ಲು ಕಾಣಿಸಿಕೊಳ್ಳುತ್ತಿದ್ದೇನೆ ಹಾಗೆಯೇ ಮಿ ಅಂಡ್ ಮಿಸಸ್ ರಾಮಾಚಾರಿಯಲ್ಲೂ ಪಾತ್ರವಿತ್ತು" ಎನ್ನುತ್ತಾರೆ ಅನಿಲ್.
ಅಲ್ಲದೆ 'ಭರ್ಜರಿ' ಮತ್ತು 'ಹೆಬ್ಬುಲಿ' ಸಿನೆಮಾಗಳಲ್ಲೂ ಅನಿಲ್ ಪಾತ್ರ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


