ಸಿನಿಮಾ ಸುದ್ದಿ

'ಜಗ್ಗು ದಾದ'ನ ಜೊತೆಗೆ 'ಬುಲ್ ಬುಲ್' ಹುಡುಗಿ

ದರ್ಶನ್ ನಾಯಕನಟನಾಗಿರುವ 'ಜಗ್ಗು ದಾದಾ' ಸಿನೆಮಾ ಚಿತ್ರೀಕರಣ ಪ್ರಗತಿಯಲ್ಲಿದ್ದು ಮುಂದಿನ ಆರು ದಿನಗಳವರೆಗೆ ಚಿತ್ರತಂಡ ಗೋವಾದಲ್ಲಿ ಚಿತ್ರೀಕರಣ ನಡೆಸಲಿದೆಯಂತೆ.

'ಜಗ್ಗು ದಾದ'ನ ಜೊತೆಗೆ 'ಬುಲ್ ಬುಲ್' ಹುಡುಗಿ
ನಟಿ ರಚಿತಾ ರಾಮ್
Published On :

ಬೆಂಗಳೂರು: ದರ್ಶನ್ ನಾಯಕನಟನಾಗಿರುವ 'ಜಗ್ಗು ದಾದಾ' ಸಿನೆಮಾ ಚಿತ್ರೀಕರಣ ಪ್ರಗತಿಯಲ್ಲಿದ್ದು ಮುಂದಿನ ಆರು ದಿನಗಳವರೆಗೆ ಚಿತ್ರತಂಡ ಗೋವಾದಲ್ಲಿ ಚಿತ್ರೀಕರಣ ನಡೆಸಲಿದೆಯಂತೆ.

ಕ್ಲೈಮ್ಯಾಕ್ಸ್ ಒಳಗೊಂಡಂತೆ ಚಿತ್ರೀಕರಣದ ಸಂಭಾಷಣೆಯ ಭಾಗ ಬಹುತೇಕ ಮುಗಿದಿದ್ದು ಹಾಡುಗಳ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಗೋವಾದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಸಲಿದ್ದು, ಸ್ಪೇನ್ ನಲ್ಲಿ ಉಳಿದ ಹಾಡುಗಳನ್ನು ಚಿತ್ರೀಕರಿಸಲಿದೆಯಂತೆ ಚಿತ್ರತಂಡ. ಈ ಸಿನೆಮಾದ ನಿರ್ದೇಶಕ ಮತ್ತು ನಿರ್ಮಾಪರಾದ ರಾಘವೇಂದ್ರ ಹೆಗಡೆ ಮಾರ್ಚ್ ೧೦ರೊಳಗೆ ಚಿತ್ರೀಕರಣ ಮುಗಿಸುವುದಾಗಿ ತಿಳಿಸಿದ್ದಾರೆ.

ಮತ್ತೊಂದು ಆಸಕ್ತಿದಾಯಕ ಸುದ್ದಿಯಲ್ಲಿ, ದರ್ಶನ್ ಜೊತೆಗೆ 'ಬುಲ್ ಬುಲ್' ಸಿನೆಮಾದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಚಿತಾ ರಾಮ್ 'ಜಗ್ಗು ದಾದಾ'ದಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಅಲ್ಲದೆ ಮತ್ತೊಬ್ಬ ನಟಿ ಪರಿಣೀತಾ ಕೂಡ ಅತಿಥಿ ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ಕೂಡ ವಿಶೇಷ.

'ಜಗು ದಾದಾ'ದ ನಾಯಕ ನಟಿ ದೀಕ್ಷಾ ಸೇಠ್. ಸೃಜನ್ ಲೋಕೇಶ್, ಗಾಯತ್ರಿ ಅಯ್ಯರ್, ವಿಶಾಲ್ ಹೆಗಡೆ, ವಿಷ್ಣು ಮತ್ತು ಯುವ ಕೂಡ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.